ಜಾನಪದ ವಿದ್ವಾಂಸ ಡಾ. ಮಳಲಿ ವಸಂತಕುಮಾರ್ ಮೂಲತಃ ಹಾಸನದವರು. ಅವರು ಜನಿಸಿದ್ದು 1945ರ ಆಗಸ್ಟ್ 6ರಂದು. ತಂದೆ ಚಿಕ್ಕೇಗೌಡ ಹಾಗೂ ತಾಯಿ ದೇವಮ್ಮ. ಹುಟ್ಟೂರು ಮಳಲಿಯಲ್ಲಿಯೇ ಪ್ರೌಢಶಾಲಾ ಶಿಕ್ಷಣ ಪಡೆದ ಇವರು ಮಹಾರಾಜ ಕಾಲೇಜಿನಲ್ಲಿ ಬಿ.ಎ. ಪದವಿ ಹಾಗೂ ಮಂಗಳೂರಿನ ಸ್ನಾತಕೋತ್ತರ ಕೇಂದ್ರದಿಂದ ಎಂ.ಎ ಪದವೀಧರರು. ಕುವೆಂಪು ಅವರ ನಾಟಕಗಳು ವಿಷಯದ ಮೇಲೆ ಪಿಎಚ್‌ಡಿ ಪಡೆದರು. ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದು, ಜನಪದ ಸಾಹಿತ್ಯ ಹಾಗೂ ಜಾನಪದ ಶಾಸ್ತ್ರೀಯ ಅಧ್ಯಯನದಲ್ಲಿ ತೊಡಗಿಸಿಕೊಂಡರು.
ಮಳಲಿ ಗಿಡ್ಡಮ್ಮ, ಹೃದರ ಗಂಗೆ, ಕರಾವು, ಕಡಲ ಕವಿತೆಗಳು, ಕಾಡು, ಕದಂಬ, ವಿವಕ್ಷೆ, ಕವಿಗಳು ಕಂಡಂತೆ ಕುವೆಂಪು, ಕುವೆಂಪು ಣಾಟಕ ಸಮೀಕ್ಷೆ, ಚಿತ್ರಂಗದ ಸಮೀಕ್ಷೆ, ಚಂದ್ರಹಾಸ ನಾಟಕ ಸಮೀಕ್ಷೆ, ಕುವೆಂಪು ಕಾವ್ಯ ಮೀಮಾಂಸೆ ಮತ್ತು ಸಾಹಿತ್ಯ ವಿಮರ್ಶೆ, ಯದುಗಿರಿಯ ವೀಣೆ, ಗ್ರಂಥಾಮೃತ, ಕೋಲು ಪದಗಳು (ಜಾನಪದ), ಸಾಹಿತ್ಯ ಮತ್ತು ಸಂಸ್ಕೃತಿ ಅವರ ಪ್ರಕಟಿತ ಕೃತಿಗಳು. ಅವರಿಗೆ 1990 ರ ರಾಜ್ಯೋತ್ಸವ ಪ್ರಶಸ್ತಿ, ಚಿಶ್ಚಮಾನವ ಪ್ರಶಸ್ತಿ, ಹೊಯ್ಸಳ ಪ್ರಶಸ್ತಿ, ಸಾಹಿತ್ಯರತ್ನ ಪ್ರಶಸ್ತಿ, ರಾಷ್ಟ್ರೀಯ ಸದ್ಭಾವನ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಸಂದಿವೆ. ಮಾರ್ಚ್ 18, 2021ರಂದು ಅವರು ನಿಧನರಾದರು.