ನಟ ಡಾ. ವಿಷ್ಣುವರ್ಧನ್ ಪ್ರಪಂಚದಾದ್ಯಂತ ಅಭಿಮಾನಿಗಳನ್ನು ಹೊಂದಿದವರು. ಅವರು 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ತಮ್ಮ ನಟನೆಗೆ ಹಲವು ಪ್ರಶಸ್ತಿಗಳನ್ನು ಮತ್ತು ಗೌರವವನ್ನು ಸಂಪಾದಿಸಿದ್ದಾರೆ. 37 ವರ್ಷಗಳ (1972-2009) ವೃತ್ತಿಜೀವನದಲ್ಲಿ ಕನ್ನಡ (200), ಹಿಂದಿ(5), ತೆಲುಗು (5), ಮಲಯಾಳಂ (3) ಮತ್ತು ತಮಿಳು (6) ಚಿತ್ರಗಳು ಸೇರಿದಂತೆ 220 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 1972ರಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ ನಿರ್ದೇಶನದ 'ವಂಶವೃಕ್ಷ' ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ವಿಷ್ಣುವರ್ಧನ್ ನಾಯಕನಾಗಿ ಕಾಣಿಸಿಕೊಂಡ ಮೊದಲ ಚಿತ್ರ ’ನಾಗರ ಹಾವು’ ಮತ್ತು ಕೊನೆಯ ಚಿತ್ರ ’ಆಪ್ತ ರಕ್ಷಕ’ ಇತಿಹಾಸದಲ್ಲಿಯೇ ಅತ್ಯಂತ ಹೆಚ್ಚು ಯಶಸ್ಸುಗಳಿಸಿದವು.
’ಮುಗಿಯದಿರಲಿ ಬಂಧನ’ ವಿಷ್ಣವರ್ಧನ್ ಅವರ ಜೀವನ ಚರಿತ್ರೆ. ಚಲನಚಿತ್ರ ಪತ್ರಕರ್ತ ಸದಾಶಿವ ಶೆಣೈ ಅವರು 'ಸಾಹಸ ಸಿಂಹ'ನ ಜೀವನವನ್ನು ಅಕ್ಷರರೂಪಕ್ಕೆ ತಂದಿದ್ದಾರೆ.
.ಲೇಖಕ ಸದಾಶಿವ ಶಣೈ ಅವರು ಬೆಂಗಳೂರು ಪ್ರೆಸ್ಕ್ಲಬ್ ಅಧ್ಯಕ್ಷರಾಗಿದ್ದರು. ‘ಪ್ರಾರ್ಥನೆ’ ಚಲನಚಿತ್ರದ ನಿರ್ದೇಶಕರು. ಮುಗಿಯದಿರಲಿ ಬಂಧನ (ಡಾ. ವಿಷ್ಣವರ್ಧನ ಅವರ ಜೀವನ ಚರಿತ್ರೆ) ನಟ ಉಪೇಂದ್ರ ಅವರ ಜೀವನ ಚರಿತ್ರೆಗೆ ಸಂಬಂಧಿಸಿದಂತೆ ‘ಉಪ್ಪಿ ಅನ್ ಲಿಮಿಟೆಡ್’ ಕೃತಿ ರಚನೆ. ...
READ MORE