ಕೊಡವ ಮತ್ತು ಕನ್ನಡ ಭಾಷೆಗಳೆರಡರಲ್ಲೂ ಕಥೆ, ಕವನ, ಕಾದಂಬರಿಗಳನ್ನು ಬರೆದು ಪ್ರಕಟಿಸಿರುವ ಕೂತಂಡ ಪಾರ್ವತಿ ಪೂವಯ್ಯ ವರ ಜೀವನ ಸಾಧನೆ ಕುರಿತು ಕೊಡಗಿನ ಜನತೆಯಾಗಲೀ, ಕನ್ನಡ ಸಾಹಿತ್ಯ ಲೋಕವಾಗಲೀ ತಿಳಿದಿರಿವುದು ಕಡಿಮೆ. ಇವರ ಬಗ್ಗೆ ಇವತ್ತಿಗೂ ಕನ್ನಡ ಸಾಹಿತ್ಯ ಮತ್ತು ಕೊಡವ ಸಾಹಿಯತ್ಯಕ್ಕೆ ಮಾಹಿತಿಯ ಕೊರತೆ ಇದೆ. ಮಹಿಳೆಯರು ಸಾಹಿತ್ಯ ಕೃಷಿಯಿಂದ ದೂರವೇ ಉಳಿಯುತ್ತಿದ್ದ ಕಾಲಘಟ್ಟದಲ್ಲಿ ಸಾಹಿತ್ಯದ ವಿವಿಧ ಪ್ರಕಾರಗಳ ಬರವಣಿಗೆಯಲ್ಲಿ, ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಬೆರಗುಮೂಡಿಸಿದವರು. ಇವರ ಬದುಕನ್ನು , ಜೀವನ ಸಾಧನೆಯನ್ನು ಲೇಖಕಿ ಎಂ.ಪಿ. ರೇಖಾ ಅವರು ಈ ಕೃತಿಯಲ್ಲಿ ವಿವರಿಸಿದ್ದಾರೆ.
ರೇಖಾ ಎಂ.ಪಿ. (ತೀತೀರ ರೇಖಾವಸಂತ) ಹುಟ್ಟಿದ್ದು 1970 ಏಪ್ರಿಲ್ 2ರಂದು ಕೊಡಗು ಜಿಲ್ಲೆಯ ಪೊನ್ನಂಪೇಟೆಯಲ್ಲಿ. ತಂದೆ ಮಾಯಣಮಾಡ ಎ ಪೆಮ್ಮಯ್ಯ, ತಾಯಿ ಸುಮತಿ. ಪ್ರಸ್ತುತ ಗೋಣಿಕೊಪ್ಪಲಿನ ಕಾವೇರಿ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಗೆಯೇ ಕರ್ನಾಟಕ ಸರ್ಕಾರದ ೨ನೇ ತರಗತಿ ಪಠ್ಯಪುಸ್ತಕದ ಅಧ್ಯಕ್ಷರು ಆಗಿದ್ದಾರೆ. ಸಂಶೋಧನೆಯಲ್ಲಿ ಆಸಕ್ತಿ ಇರುವ ಇವರು ಆಧುನಿಕ ಕೊಡವ ಸಾಹಿತ್ಯ, ಅರಿಕಟ್ಟು, ಕಾಳಿದಾಸ ಸಂಶೋಧನ ಕೃತಿಗಳನ್ನು ರಚಿಸಿದ್ದಾರೆ. ಕೊಡವ ರಂಗಭೂಮಿ, ಕೊಡವರ ಕುಲಾಚಾರಾದಿ ತತ್ಕಜೀವಿ, ಅಂಕು ಇವರ ಇತರ ಕೃತಿಗಳಾಗಿವೆ. ಇವರಿಗೆ ಕೊಡಗಿನ ಪ್ರಮುಖ ಲೇಖಕಿ, ಕೊಡಗಿನ ಗೌರಮ್ಮ ನಿಧಿ, ...
READ MORE