ರೇಖಾ ಎಂ.ಪಿ. (ತೀತೀರ ರೇಖಾವಸಂತ) ಹುಟ್ಟಿದ್ದು 1970 ಏಪ್ರಿಲ್ 2ರಂದು ಕೊಡಗು ಜಿಲ್ಲೆಯ ಪೊನ್ನಂಪೇಟೆಯಲ್ಲಿ. ತಂದೆ ಮಾಯಣಮಾಡ ಎ ಪೆಮ್ಮಯ್ಯ, ತಾಯಿ ಸುಮತಿ. ಪ್ರಸ್ತುತ ಗೋಣಿಕೊಪ್ಪಲಿನ ಕಾವೇರಿ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಗೆಯೇ ಕರ್ನಾಟಕ ಸರ್ಕಾರದ ೨ನೇ ತರಗತಿ ಪಠ್ಯಪುಸ್ತಕದ ಅಧ್ಯಕ್ಷರು ಆಗಿದ್ದಾರೆ.
ಸಂಶೋಧನೆಯಲ್ಲಿ ಆಸಕ್ತಿ ಇರುವ ಇವರು ಆಧುನಿಕ ಕೊಡವ ಸಾಹಿತ್ಯ, ಅರಿಕಟ್ಟು, ಕಾಳಿದಾಸ ಸಂಶೋಧನ ಕೃತಿಗಳನ್ನು ರಚಿಸಿದ್ದಾರೆ. ಕೊಡವ ರಂಗಭೂಮಿ, ಕೊಡವರ ಕುಲಾಚಾರಾದಿ ತತ್ಕಜೀವಿ, ಅಂಕು ಇವರ ಇತರ ಕೃತಿಗಳಾಗಿವೆ. ಇವರಿಗೆ ಕೊಡಗಿನ ಪ್ರಮುಖ ಲೇಖಕಿ, ಕೊಡಗಿನ ಗೌರಮ್ಮ ನಿಧಿ, ಹಾಗೂ ಕೊಡಗು-ರಂಗಾಯಣ ಬಹುಮಾನಗಳು ಒಲಿದುಬಂದಿವೆ.