ಕ್ಷಣ ಹೊತ್ತು ಆಣಿ ಮುತ್ತು -7 ಎಸ್. ಷಡಕ್ಷರಿ ಅವರ ಅಂಕಣ ಬರೆಹಗಳು. ನೀತಿಯನ್ನು ಭೋದನೆಯಂತೆ ಹೇಳದೆ ನವಿರಾಗಿ ಪ್ರಸ್ತತ ಪಡಿಸಿರುವ ಕತೆಗಳಿವೆ. ಮನಕ್ಕೆ ಮುದ ನೀಡುವ ಇವು ದೊಡ್ಡವರನ್ನು ಆಕರ್ಷಿಸುತ್ತಾ, ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಮೌಲ್ಯಯುತ ವಿಚಾರಗಳನ್ನು ತಲುಪಿಸುತ್ತವೆ. ಇದು ಸಾವಿರದ, ಸಾವು ಇರದ ಪುಸ್ತಕ ಎಂದು ಚೆನ್ನವೀರ ಕಣವಿ ಕರೆದಿದ್ದಾರೆ. ಹೊಸ ಹೊಸ ಓದುಗರನ್ನು ಹುಟ್ಟುಹಾಕುತ್ತಾ ಸಾಗುತ್ತಿದೆ.
ಕ್ಷಣ ಹೊತ್ತು ಆಣಿ ಮುತ್ತು-7-ಪ್ರಜಾವಾಣಿ
ಷಡಕ್ಷರಿ ಟೈಮ್!
ಕತೆಗಳ ಮೂಲಕ ಅರಿವು ಮೂಡಿಸುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬಂದಿರುವವರು ಎಸ್. ಷಡಕ್ಷರಿ. ಅವರ ಕ್ಷಣಹೊತ್ತು ಆಣಿಮುತ್ತು ಕನ್ನಡದಲ್ಲಿ ಅತ್ಯಂತ ಹೆಚ್ಚು ಮಾರಾಟವಾದ ಪುಸ್ತಕಗಳ ಎಲಲ್ಲಿ ಉತ್ತುಂಗದಲ್ಲಿದೆ. ಪತ್ರಿಕೆಗೆ ನಿತ್ಯವೂ ಅಂಕಣ ಬರೆದುಕೊಂಡು ಬಂದಿರುವ ಕ್ಷಣ ಹೊತ್ತು - ಷಡಕ್ಷರಿ, ಕಳದ ಆನೇಕ ವರ್ಷಗಳಲ್ಲಿ ಆಣಿ ಮುತ್ತು ಪತ್ರಿಕೆಗೆ ಬರೆದ ಅಂಕಣಗಳನ್ನು ಸಂಗ್ರಹಿಸಿ ಕ್ಷಣಹೊತ್ತು ಮಾಲಿಕೆಯ ಏಳನೆಯ ಪುಸ್ತಕ ಹೊರತಂದಿದ್ದಾರೆ. ಮೊದಲ ಮುದ್ರಣದಲ್ಲೇ 5000 ಪ್ರತಿಗಳನ್ನು ಮುದ್ರಿಸುವ ಕನ್ನಡದ ಏಕೈಕ ಲೇಖಕರೆಂದರೆ ಇವರೇ. 166 ಪುಟ, 100 ರುಪಾಯಿ, ಚೆಂದದ ಮುದ್ರಣ, ಒಂದೇ ಒಂದು ಅಚ್ಚಿನ ಇಲ್ಲದೇ ಇರುವುದು ಈ ಪುಸ್ತಕದ ಹೆಗ್ಗಳಿಕೆ. ನೀತಿಯನ್ನು ಶುಷ್ಕವಾದ ಬೋಧನೆಯ ರೂಪದಲ್ಲಿ ಹೇಳುವ ಬದಲು ಸ್ವಾರಸ್ಯಕರ ಕಥಾರೂಪದಲ್ಲಿ ನಿರೂಪಿಸಿರುವುದರಿಂದ ಈ ಪುಸ್ತಕ ಹೆಚ್ಚು ಆಕರ್ಷಕವೂ - ಅರ್ಥಗರ್ಭಿತವೂ ಆಗಿದೆ ಎಂದು ಎಸ್ ಎಲ್ ಭೈರಪ್ಪ ಇದನ್ನು ಮೆಚ್ಚಿಕೊಂಡಿದ್ದಾರೆ. ಇದು ಸಾವಿರದ, ಸಾವು ಇರದ ಪುಸ್ತಕ ಎಂದು ಚೆನ್ನವೀರ ಕಣವಿ ಕರೆದಿದ್ದಾರೆ. ಹೊಸ ಹೊಸ ಓದುಗರನ್ನು ಹುಟ್ಟುಹಾಕುತ್ತಾ ಮುಂದೆ ಸಾಗುತ್ತಿರುವ ಷಡಕ್ಷರಿ ಅವರ ಆಣಿಮುತ್ತಿನ ಕ್ಷಣ ಹೊತ್ತುಗಳು ಚಿರಾಯುವಾಗಲಿ.
ಕೃಪೆ: ಕನ್ನಡಪ್ರಭ, ಬಿಸಿಲು ನೆರಳು (2020 ಜನವರಿ 12)
©2024 Book Brahma Private Limited.