`ಜಾಗೋ ಭಾರತ್-ಭಾಗ 2' ಲೇಖಕ ಚಕ್ರವರ್ತಿ ಸೂಲಿಬೆಲೆ ಅವರು ಬರೆದ ಅಂಕಣ ಬರಹಗಳ ಸಂಕಲನ. ಕ್ಯೂಬಾದಲ್ಲಿ ಜನ ಗೋವನ್ನು ಪೂರ್ತಿ ತಿಂದು ಖಾಲಿ ಮಾಡಿದ ಮೇಲೆ, ಅಳಿದುಳಿದ ಗೋವನ್ನು ಉಳಿಸಲು ಅಲ್ಲಿನ ಸರ್ಕಾರ ಗೋಹತ್ಯೆ ನಿಷೇಧಿಸಿತಂತೆ. ಇರಾನ್ನಲ್ಲಿ ಫಾರ್ಸಿಯವನೊಬ್ಬ ಕೇಳಿಕೊಂಡನೆನ್ನುವ ಕಾರಣಕ್ಕೆ ಅಲ್ಲಿನ ಮುಸ್ಲಿಮ್ ಸರ್ಕಾರ ಗೋಹತ್ಯೆ ನಿಷೇಧಿಸಿತಂತೆ. ಭಾರತದಲ್ಲಿ ಮಾತ್ರ ಹಾಗಾಗುವುದಿಲ್ಲ ಎನ್ನುವುದೇ ಅಚ್ಚರಿ.. ಹೀಗೆ ಇಲ್ಲಿನ ಅಂಕಣ ಬರಹಗಳು ಸಾಗುತ್ತದೆ. ಬರಹಗಳು ವೈವಿಧ್ಯಮಯ, ಮಾಹಿತಿಭರಿತ, ಧ್ವನಿಪೂರ್ಣ. ರಾಜಕೀಯ, ಸಾಮಾಜಿಕ, ಆರ್ಥಿಕ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಬೆಳವಣಿಗೆಗಳು, ಸಮಸ್ಯೆಗಳು ಇತ್ಯಾದಿ ವಿಶ್ಲೇಷಣೆ ಬರಹಗಳಲ್ಲಿದೆ.
©2024 Book Brahma Private Limited.