‘ಇಮ್ಮಡಿ ಹರಿಹರನ ಶಾಸನಗಳು’ ಎಸ್. ನಾಗರಾಜಪ್ಪ ಅವರು ಸಂಪಾದಿಸಿರುವ ಕೃತಿಯಾಗಿದೆ. ವಿಜಯನಗರ ಸಾಮ್ರಾಜ್ಯದ ಚರಿತ್ರೆ ಅನೇಕ ಕೌತುಕ ಮತ್ತು ಕುತೂಹಲಗಳಿಗೆ ಸಾಕ್ಷಿಯಾಗಿದೆ. ಇದು ಸಾಮ್ರಾಜ್ಯದ ಎಲ್ಲ ಆಯಾಮಗಳಿಗೆ ಅನ್ವಯಿಸುವ ಮಾತು. ಇದನ್ನು ಸಂಗಮ ಸಾಳುವ, ತುಳುವ ಮತ್ತು ಅರವೀಡು ಮನೆತನಗಳು ಆಳ್ವಿಕೆ ನಡೆಸಿದವು. ವಿಜಯನಗರ ಸಾಮ್ರಾಜ್ಯದ ಇತಿಹಾಸವೆಂದರೆ ಕೃಷ್ಣದೇವರಾಯರ ಇತಿಹಾಸ ಎನ್ನುವುದು ಒಂದೆಡೆಯಾದರೆ, ಸಂಗಮ ಮನೆತನ ಎಂದ ತಕ್ಷಣ ಎಲ್ಲರೂ ನೆನಪಿಸಿಕೊಳ್ಳುವುದು ಇಮ್ಮಡಿ ದೇವರಾಯನನ್ನು ಮಾತ್ರ. ಇಮ್ಮಡಿ ದೇವರಾಯನಿಗಿಂತಲೂ ಪೂರ್ವದಲ್ಲಿ ಅನೇಕ ದೊರೆಗಳು ಆಳಿರುವುದನ್ನು ವಿದ್ವಾಂಸರ ಸಹಿತ ಎಲ್ಲರೂ ಮರೆತೇ ಬಿಡುತ್ತಾರೆ. ವಾಸ್ತವವಾಗಿ ಇಮ್ಮಡಿ ದೇವರಾಯನಿಗಿಂತ ಮೊದಲು ವಿಶಾಲವಾದ ಸಾಮ್ರಾಜ್ಯ ಸ್ಥಾಪನೆಗೆ ಪಣತೊಟ್ಟು, ಆ ನಿಟ್ಟಿನಲ್ಲಿ ಸತತ ಪ್ರಯತ್ನ ನಡೆಸಿ, ಆಂದ್ರಪ್ರದೇಶದಲ್ಲಿನ ಗೋದಾವರೀ ನದಿಯವರೆಗೆ ತನ್ನ ದಂಡಯಾತ್ರೆಯನ್ನು ಕೈಕೊಂಡು ಯಶಸ್ವಿಯಾದವನು ಇಮ್ಮಡಿ ಹರಿಹರ. ಇಂತಹ ದೂರದೃಷ್ಟಿಯ ಮತ್ತು ಜನಾನುರಾಗಿ ಅರಸನ ಎಲ್ಲ ಶಾಸನಗಳನ್ನು ಒಂದೆಡೆ ತರುವ ಪ್ರಯತ್ನ ಈ ಪುಸ್ತಕದಲ್ಲಿ ಮಾಡಿದ್ದಾರೆ.
©2024 Book Brahma Private Limited.