ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿರುವ ಸ.ಚಿ. ರಮೇಶ್ ಅವರು ಜಾನಪದ ವಿದ್ವಾಂಸರಲ್ಲಿ ಒಬ್ಬರು. ಡಾ.ಎಸ್.ಎಚ್ ರಮೇಶ ಅವರು ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ, ಜಾನಪದ ಪದವಿ ಪಡೆದಿರುವ ಅವರು ಕನ್ನಡ ವಿಶ್ವವಿದ್ಯಾಲಯದಿಂದ ಎಂ.ಫಿಲ್, ಪಿಎಚ್.ಡಿ ಪದವಿ ಪಡೆದಿದ್ದಾರೆ. ಜಾನಪದ ಸಾಹಿತ್ಯ, ಕನ್ನಡ ಸಾಹಿತ್ಯ, ಪರಿಸರ ಚಿಂತನೆ, ಪಾರಂಪರಿಕ ಕೃಷಿ ಅವರ ಅಸಕ್ತಿಯ ಕ್ಷೇತ್ರಗಳು. ಜಾನಪದ ಕರ್ನಾಟಕ ಸಂಪುಟ-3, ಸಂಚಿಕೆ-1, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, (2004), ಮಾಟ–ಮಂತ್ರ–ಮೋಡಿ, ಅಲೆಮಾರಿಗಳ ಸ್ಥಿತಿಗತಿ, ನೀರು : ಒಂದು ಜಾನಪದ ನೋಟ,ದಕ್ಷಿಣ ಭಾರತೀಯ ಜಾನಪದ ಕೋಶ, ಸಂಪುಟ-2 ಅವರ ಪ್ರಕಟಿತ ಕೃತಿಗಳು. ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಕುಲಸಚಿವರಾಗಿ (ಮೌಲ್ಯಮಾಪನ) ಕಾರ್ಯ ನಿರ್ವಹಿಸಿದ ಅವರು ಕರ್ನಾಟಕ ವಸ್ತು ಸಂಗ್ರಹಾಲಯ, ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.