ಇಗೋ ಕನ್ನಡ (ಸಂಯುಕ್ತ ಸಂಪುಟ)-ಈ ಕೃತಿಯನ್ನು ವಿದ್ವಾಂಸ ಪ್ರೊ. ಜಿ. ವೆಂಕಟಸುಬ್ಬಯ್ಯ ಅವರು ರಚಿಸಿದ್ದು, ಕನ್ನಡ ಕಲಿಕೆ ಹಾಗೂ ಬೋಧನೆಗೆ ಪರಿಣಾಮಕಾರಿಯಾದ ಪುಸ್ತಕವಿದು. ಪ್ರಜಾವಾಣಿಯ ಅಂಕಣಗಳಲ್ಲಿ ಪ್ರಸಿದ್ಧಿ ಪಡೆದ ಈ ವಿಷಯದ ಬರೆಹಗಳು (ಇಗೋ ಕನ್ನಡದ ಮೂರು ಸಂಪುಟಗಳು) ಸೇರಿಸಿ ಸಂಯುಕ್ತ ಸಂಪುಟವಾಗಿದೆ. ಜನರಿಂದಲೇ ಕೇಳಲಾದ ಪದಗಳಿಗೆ ಇಲ್ಲಿ ವಿವರಣೆ ಇದೆ. ಪದದ ಮೂಲ, ವ್ಯುತ್ಪತ್ತಿ, ಅದು ಬಳಕೆಯಾದ ಪ್ರಸಿದ್ಧ ಕಾವ್ಯ, ಆಡುನುಡಿಗಳಲ್ಲಿ ಅದರ ರೂಪ ಬದಲಾವಣೆ ಹೀಗೆ ಎಲ್ಲ ವಿವರಗಳಿವೆ.
©2024 Book Brahma Private Limited.