‘ಈಗ ಹೀಗಿರುವ ಲೋಕದಲ್ಲಿ’ ಕೃತಿಯು ದೇವು ಪತ್ತಾರ ಅವರ ಅಂಕಣ ಹಾಗೂ ಪ್ರಬಂಧ ಬರಹಗಳಾಗಿವೆ. ಇಲ್ಲಿ ಕಥೆಗಾರನಿಗಿರಬೇಕಾದ ಕುಸುರಿತನ, ಪತ್ರಕರ್ತನಿಗಿರಬೇಕಾದ ವಿನಯ ಈ ಎಲ್ಲವನ್ನೂ ಹೊಂದಿರುವ ದೇವು ಪತ್ತಾರ ನೂರಾರು ಊರುಗಳನ್ನು ತಿರುಗಿ ಬಂದು, ಹತ್ತು ಹಲವು ಜನರೊಂದಿಗೆ ಒಡನಾಡಿ, ಅವರ ಮಾತುಗಳನ್ನು ಕೇಳಿಸಿಕೊಂಡು ಇತಿಹಾಸವನ್ನೂ ಕಡತಗಳನ್ನೂ ಓದಿ ಬರೆದಿರುವುದು ಇಲ್ಲಿದೆ. ಇಲ್ಲಿ ಬರುವ ಆಲಗೂರಿನ ಗಿಟಾರ್ ರಾಚಪ್ಪ, ಸುರಪುರದ ಟೇಲರ್ ಸಾಹೇಬ, ರಷ್ಯಾಕ್ಕೆ ಅಚಾನಕ್ಕಾಗಿ ಹೋಗಿ ಬಂದ ಶೇಷರಾವ ಕಾಮತೀಕರಣ, ಷಣ್ಮುಖಪ್ಪ ಎಂಬ ಗಾಯಕ, ಫೋಟೋಗ್ರಾಫರ್ ಮುಂತಕಾ ಇವರೆಲ್ಲರು ಕೂಡ ಇಲ್ಲಿ ವಿಶೇಷವಾಗಿ ಹೊರಹೊಮ್ಮಿದ್ದಾರೆ. ಇಲ್ಲಿ ಗಿಟಾರ್ ಮಾಂತ್ರಿಕ ಆಲಗೂರ ರಾಚಪ್ಪ, ರಷ್ಯಾಗೆ ಹೋದರು ಕಾಮತೀಕರ್, ಸಮಾಧಿ ಹುಡುಕಿ ಬಂದರು ಜಸ್ ರಾಜ್, ನಗಿಸುವ ಕಾಯಕದ ಷಣ್ಮುಖಪ್ಪ, ಕಥೆಯಾಗುವವರ ನಡುವೆ, ನೆಲ ಹಸಿರಾಗಿಸಿದ ಕನಸಿಗ, ಬೀದರಲ್ಲಿ ಬರ ಬಂದರೆ ಮೈಸೂರಲ್ಲಿ ವಡೆ ದುಬಾರಿ, ಸುರಪುರದ ಟೇಲರ್ ಸಾಹೇಬ, ಇಂಥವರೂ ಇದ್ದರು, ಅರಿಯಲಾಗದೆ ಹೋದ ಮೆರಾಜುದ್ದೀನ್, ಓಲಿಂಪಿಕ್ಸ್: ಸಿ.ಜಿ.ಕೆ, ಲಂಕೇಶ್, ಕನವಳ್ಳಿ, ಆಮೆಯಂತಹ ರಾಜಕಾರಣಿ, ರಾಮ ಹಾಡಿದ ಮಾತಾ ಕಾಲಿಕಾ, ಸಾಮಾನ್ಯರ ‘ಕೊಂಡಯ್ಯ’; ‘ಪ್ರೇಮ’ದ ರೂವಾರಿ, ಜೇನಿನ ಸಿಹಿಹಂಚುವ ಮುಂತಕಾ ಲೇಖನಗಳನ್ನು ಕಾಣಬಹುದಾಗಿದೆ.
©2024 Book Brahma Private Limited.