ಹುರಿದುಂಬಿ

Author : ಕೆ. ಕರಿಸ್ವಾಮಿ

Pages 160

₹ 140.00




Published by: ಅಂಕ ಪ್ರಕಾಶನ

Synopsys

ಕವಿ, ನಾಟಕಕಾರ ಮತ್ತು ಕಥೆಗಾರರೂ ಆದ ಕರಿಸ್ವಾಮಿ ಸಮಕಾಲೀನ ವಿಷಯಗಳ ಬಗ್ಗೆ ಬರೆದ ಲೇಖನಗಳ ಸಂಕಲನವೇ ’ಹುರಿದುಂಬಿ’. ಇಲ್ಲಿ ಸಮಕಾಲೀನ ವಿಷಯಗಳ ಜೊತೆಗೆ ವ್ಯಕ್ತಿಗಳ ಬಗ್ಗೆಯೂ ಚುಟುಕಾಗಿ, ಚುರುಕಾಗಿ ಬರೆದ ಲೇಖನಗಳಿವೆ. ಕೆಲವು ಲೇಖನಗಳು ಸಂಕ್ಷಿಪ್ತವಾಗಿದ್ದೂ ಸಮಗ್ರವಾಗಿ ಮೂಡಿಬಂದಿವೆ. ಆರ್ಥಿಕ ಹಿನ್ನಡೆ, ಮಠಗಳ ಸಂಖ್ಯೆ ಹೆಚ್ಚುವ ಹಿಂದಿನ ರಾಜಕೀಯ ಒತ್ತಡ, ಮಾಯಾವತಿಯ ಪ್ರತಿಮೆಯ ವ್ಯಸನದ ಬಗೆಗಿನ ಅವರ ಬರಹಗಳು ಈ ಕೃತಿಯಲ್ಲಿವೆ.

About the Author

ಕೆ. ಕರಿಸ್ವಾಮಿ
(15 June 1971)

.ಲೇಖಕ ಹಾಗೂ ಪತ್ರಕರ್ತ  ಕೆ. ಕರಿಸ್ವಾಮಿ ಅವರು ಮೂಲತಃ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಗುಳಿಗೇನಹಳ್ಳಿ ಅಂಚೆ ವ್ಯಾಪ್ತಿಯ ಜವನಹಳ್ಳಿ ಗ್ರಾಮದವರು. ಕಂಪ್ಯೂಟರ್ ಸೈನ್ಸ್ ನಲ್ಲಿ ಬಿಎಸ್ ಸಿ ಪದವೀಧರರು. ಏಷ್ಯನ್ ಕಾಲೇಜ್ ಆಫ್ ಜರ್ನಲಿಸಂ (1999), ಪತ್ರಿಕೋದ್ಯಮದಲ್ಲಿ (1999) ಸ್ನಾತಕೋತ್ತರ ಡಿಪ್ಲೊಮಾ, ಅಳಗಪ್ಪ ವಿವಿಯಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ (ಎಂ.ಎ-2007.), ಹಾಗೂ ಹಂಪಿಯ ಕನ್ನಡ ವಿ.ವಿ.ಯಿಂದ ಡಾಕ್ಟರೇಟ್ ಆಫ್ ಲಿಟರೇಚರ್ (ಡಿ.ಲಿಟ್-2021)  ಪದವೀಧರರು. ಸದ್ಯ, ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಬೆಂಗಳೂರಿನ ಮೆರು ಇನ್ಫೋ ಸಲ್ಯೂಷನ್ಸ್,ನಲ್ಲಿ ಮುಖ್ಯ ಸಂಪಾದಕ,, ಟೈಮ್ಸ್ ಇಂಟರ್‍ನೆಟ್ ಲಿಮಿಟೆಡ್.ನಲ್ಲಿ ಉಪಸಂಪಾದಕ,  ಪ್ರಜಾಪ್ರಗತಿ ದಿನಪತ್ರಿಕೆಯ ಉಪ ಸಂಪಾದಕ, ನಂತರ, ವಿಜಯ ಕರ್ನಾಟಕ ದಿನಪತ್ರಿಕೆಯ ಸಂಪಾದಕೀಯ ವಿಭಾಗದಲ್ಲಿ ವಿವಿಧ ...

READ MORE

Related Books