‘ಹೂ ಬಿಸಿಲಿನ ನೆರಳು’ ಕೃತಿಯು ವಿಶ್ವೇಶ್ವರ ಭಟ್ ಅವರ ಅಂಕಣ ಬರಹಗಳ ಸಂಗ್ರಹ ಕೃತಿ-ನೂರೆಂಟು-4. ಕೃತಿಗೆ ಬೆನ್ನುಡಿ ಬರೆದ ಕಮಲಿ ಹೆದ್ದಾರಿ ಅವರು, ‘ಹೂ ಬಿಸಿಲು ಬಿಸಲೂ ಅಲ್ಲ. ಅದರ ನೆರಳು ನೆರಳೂ ಅಲ್ಲ. ಆದರೆ ಅವರೆಡೂ ಕೊಡುವ ತಂಪು ಮಾತ್ರ ತಂಪುತಂಪು. ಹೂ ಬಿಸಿಲಿಗೆ ಒಡ್ಡಿಕೊಳ್ಳುವ ಸುಖವೇ ಸುಖ. ನೆರಳು ಯಾವುದಾದರೇನು, ಅದು ಕೊಡುವ ಹಿತವೇ ಹಿತ. ಇಲ್ಲಿನ ಬರಹಗಳ ಬಗ್ಗೆ ಇದೇ ಮಾತು ಹೇಳಬೇಕೆನಿಸಿತು. ಒಂದೊಂದು ಬರಹಗಳ ಬಿಸಿಲಿಗೆ ಮನಸ್ಸನ್ನು ಬೆಚ್ಚಗೆ ಕಾಯಿಸಿಕೊಂಡ ಅನುಭವ, ಗಿಳಿ ಚುಂಚ ಕಂಡರೆ ಹಣ್ಣುಗಳಿಗೆ ಕಡಿಸಿಕೊಳ್ಳುವ ಆಸೆಯಂತೆ, ಹಾತೊರೆಯುವ ಮನಸ್ಸುಗಳಿಗೂ ಓದುವ ಆಸೆ, ಹೂ ಬಿಸಿಲಿನ ನೆರಳಲ್ಲಿ ಆ ಆಸೆ ಮೊಟ್ಟೆಯೊಡೆದಾವು’ ಎಂದಿದ್ದಾರೆ.
©2024 Book Brahma Private Limited.