ಹೊಳೆವ ಬಳೆಗಳ ಹಿಂದೆ

Author : ಕೆ.ಎಸ್. ಚೈತ್ರಾ

Pages 344

₹ 216.00




Year of Publication: 2018
Published by: ಸ್ನೇಹ ಬುಕ್ ಹೌಸ್
Address: ನಂಬರ್ 165, 10ನೇ ಮುಖ್ಯರಸ್ತೆ. ಶ್ರೀನಗರ ಬಸ್ ಸ್ಟಾಂಡ್ ಸಮೀಪ, ಶ್ರೀನಗರ, ಬೆಂಗಳೂರು, ಕರ್ನಾಟಕ -560050

Synopsys

ಹೊಳೆವ ಬಳೆಗಳ ಹಿಂದೆ- ಡಾ.ಕೆ.ಎಸ್. ಚೈತ್ರಾ ಅವರ ಅಂಕಣ ಬರಹಗಳ ಸಂಗ್ರಹ. ತೊಟ್ಟಿಲು ತೂಗುವ ಕೈ, ಹೊಳೆವ ಬಳೆಗಳ ಹಿಂದೆ. ಹೀಗೆ ಸ್ತ್ರೀಜಗತ್ತಿನ ಅನಾವರಣಕ್ಕೆ ಹಲವು ರೂಪಕಗಳು ಬಂದು ಒದಗಿವೆ. ಹೊಳೆವ ಬಳೆಗಳ ಹಿಂದೆ ಎಂಬ ಸಮರ್ಥನೀಯ ರೂಪಕವನ್ನು ಇಟ್ಟುಕೊಂಡು ಸ್ತ್ರೀ ಜಗತ್ತಿನ ಆಗುಹೋಗುಗಳನ್ನು ನಿವೇದಿಸಿದ್ದಾರೆ ಲೇಖಕಿ ಡಾ.ಕೆ.ಎಸ್‌.ಚೈತ್ರಾ. ಇದು ಅಂಕಣ ಬರಹಗಳ ಗುಚ್ಛವಾಗಿದ್ದರೂ ಇದನ್ನು ಭಾವ, ಜೀವ, ಪುಸ್ತಕ, ಪರದೆ ಹೀಗೆ ನಾಲ್ಕು ವಿಂಗಡಣೆಗಳನ್ನು ಮಾಡಲಾಗಿದೆ. ಈ ಪುಸ್ತಕದ ಮುಖ್ಯ ಆತ್ಮವೇ ಉಪದೇಶದಂತೆ ಭಾಸವಾದರೆ ಆಶ್ಚರ್ಯವಿಲ್ಲ. ಇದು ಈ ಬರಹಗಳ ಮಿತಿಯೂ ಹೌದು ಎನ್ನಬಹುದು. ಮೆಲ್ಲಗೆ ನೀಡುವ ಸಲಹೆಗಳೆಲ್ಲವೂ ಹಲವೆಡೆ ಉಪದೇಶಗಳಾಗಿಯೂ ರೂಪಾಂತರ ಆಗಿರುವುದನ್ನು ಅಲ್ಲಲ್ಲಿ ಗುರುತಿಸಬಹುದು. 

About the Author

ಕೆ.ಎಸ್. ಚೈತ್ರಾ

ಉದಯೋನ್ಮುಖ ಬರಹಗಾರ್ತಿಯಾದ ಚೈತ್ರಾ ಕೆ.ಎಸ್ ಅವರು ಹುಟ್ಟಿದ್ದು 1974 ಜೂನ್ 27. ವೃತ್ತಿಯಲ್ಲಿ ದಂತವೈದ್ಯೆಯಾಗಿರುವ ಅವರು ವೈದ್ಯ ಸಾಹಿತ್ಯ ರಚನೆಗಳಲ್ಲಿ ಹೆಸರಾದವರು. ವ್ಯಕ್ತಿತ್ವ ವಿಕಸನದಲ್ಲೂ ತಮ್ಮ ಪ್ರತಿಭೆ ತೋರಿದ್ದಾರೆ. ವಿದ್ಯಾರ್ಥಿಯಾಗಿದ್ದನಿಂದಲೆ ತಮ್ಮ ಒಲವನ್ನು ಸಾಹಿತ್ಯದೆಡೆ ಕಂಡುಕೊಂಡವರು ಸಮಗ್ರ ಸಾಧನೆಗಾಗಿ ಅಂತರರಾಷ್ಷ್ರೀಯ ಅತ್ಯತ್ತಮ ವಿದ್ಯಾರ್ಥಿ ಪ್ರಶಸ್ತಿ ಪಡೆದಿದ್ದಾರೆ. ಆರೋಗ್ಯದ ನಗುವಿಗಾಗಿ, ಕುಶಲವೇ ಕ್ಷೇಮವೇ, ಯೋಗಕ್ಷೇಮ, ಪರಿಪೂರ್ಣ ವ್ಯಕ್ತಿತ್ವ ವ್ಯಕ್ತಿತ್ವ ವಿಕಸನ ಕೃತಿಗಳು.  ಉದಯೋನ್ಮುಖ ಬರಹಗಾರ ಪ್ರಶಸ್ತಿ, 'ಕಥಾರಂಗಂ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಂತರರಾಷ್ಟ್ರೀಯ ಮಹಿಳಾ ವರ್ಷದ ದತ್ತಿನಿಧಿ ಬಹುಮಾನ. ಶಿವಮೊಗ್ಗೆಯ ನಾವಿಕ ಪತ್ರಿಕೆಗೆ “ಅಮೇರಿಕಾ ಪತ್ರ” ಮಹಿಳಾ ...

READ MORE

Related Books