ಲೇಖಕ-ಪತ್ರಕರ್ತ ಪ್ರಭುಲಿಂಗ ನೀರೂರೆ ಅವರು ವಿಜಯ ಕರ್ನಾಟಕ ಪತ್ರಿಕೆಗೆ ಬರೆದ ಅಂಕಣಗಳ ಬರಹ-ಹಿಂಗ್ಯಾಕಂತಾರೆ?. 'ಹಳ್ಳಿಗಳೆಂದರೆ ಬರೀ ಮನೆಗಳೆಲ್ಲ, ಮನುಷ್ಯರಲ್ಲ, ದನಕರುಗಳಲ್ಲಿ,ರಸ್ತೆ ಚರಂಡಿಗಳಲ್ಲ... ಇವೆಲ್ಲವೂ ಸೇರಿದ ಭಾರತ ಮತ್ತು ಅದರ ಆತ್ಮ ಎಂದು ಮಹಾತ್ಮ ಗಾಂಧೀಜಿ ಹೇಳಿದ್ದರು. ಭಾರತದ ಎಲ್ಲಾ ಹಳ್ಳಿಗಳ ಸಮಸ್ತ ವಿವರಗಳು, ಬದುಕು ಒಂದೇ ತೆರನಾಗಿ ಕಂಡುಬಂದರೂ ಪ್ರತಿ ಗ್ರಾಮವು ತನ್ನದೇ ಆದ ಅಸ್ತಿತ್ವ, ಒಳಗೊಂಡಿದೆ. ಗ್ರಾಮೀಣ ಬದುಕಿನ ವಿವಿಧ ಆಯಾಮಗಳನ್ನು, ಅಲ್ಲಿನ ಚಾರಿತ್ರಿಕ ಅಂಶಗಳನ್ನು ಗುರುತಿಸುವ, ದಾಖಲಿಸುವ ಕೆಲಸ ಕೆಲವರು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ, ಕಲಬುರಗಿ ಜಿಲ್ಲೆಯ ಅನೇಕ ಊರುಗಳ, ಓಣಿಗಳ, ಗುಂಬಜಗಳ, ಕೆರೆಗಳ, ರಸ್ತೆಗಳ,ಸ್ಥಳಗಳ ಹೀಗೆ ಅನೇಕ ವಿಷಯಗಳ ಕುರಿತಂತೆ "ಹಿಂಗ್ಯಾಕoತಾರ ?" ಕೃತಿ ಪಕ್ಷಿನೋಟ ನೀಡುತ್ತದೆ. ಗ್ರಾಮಗಳ ಇತಿಹಾಸ ಅಲ್ಲಿನ ಚಾರಿತ್ರಿಕ ಅಂಶ,ನಗರದ ವೃತ್ತ ಹಾಗೂ ಹಳೆಯ ಬಡಾವಣೆ ಬಗ್ಗೆ ಯಾವ ಕಾರಣಕ್ಕಾಗಿ ಹೆಸರು ಬಂದಿದೆ. ಅದರ ಹಿನ್ನೆಲೆ, ಇತಿಹಾಸದ ಕುರಿತು ಅಂಕಣ ರೂಪದಲ್ಲಿ ದಾಖಲಿಸಿದ ಉದಾಹರಣೆಗಳನ್ನು ಈ ಕೃತಿ ಒಳಗೊಂಡಿವೆ. ಇಲ್ಲಿಯ ಫಿಲ್ಟರ್ ಬೆಡ್ ಹಿಂದಿನ ರೋಚಕ ಕತೆ, ಕೇಶವಪುರ ದಿಂದ ಗಡಿಕೇಶ್ವಾರ, ದಂಡಿನ ಗೋಡೆ ಇತಿಹಾಸ ರೋಚಕ, ಶಾಹಿ ಬಜಾರ್ ಶಹಬಜಾರ್ ಆಗಿದ್ದು ಹೀಗೆ,ಐವನ್ -ಏ -ಶಾಹಿ ಬಂದಿದ್ದು ಹೇಗೆ?, ಸಿಬಿಐ ಕಾಲೋನಿ ಆಗಿದ್ದು ಹೀಗೆ!,ಚಕ್ರ ಕಟ್ಟ ಹಿಂದಿದೆ ರೋಚಕ ಕಥೆ,ಅದು ಚೋರಲ್ಲ ಶೋರ್ ಗುಂಬಜ್, ಹಾರುಗೇರಿ ಹೋಗಿ ಬ್ರಹ್ಮ ಪೂರ್ ಆಯ್ತು, ಅಡತ ಬಜಾರ್ ನಿಂದ ನೆಹರು ಗಂಜ್, ಯಂಕವ್ವ ಮಾರ್ಕೆಟ್ ಆಗಿದ್ದು ಹೀಗೆ.., ಆಫ್ರಿಕಾ ವಾಸಿಗಳ ಪ್ರದೇಶವೇ ಪಾಯನ್ ಏರಿಯಾ, ರೋಜಾ ಹೆಸರಿನಲ್ಲಿ ರೋಚಕ ಇತಿಹಾಸ, ಕಾಳುಗೆಯಿಂದ ಕಾಳಗಿ,ಜಾಫರಖಾನನಿಂದ ಜಾಫರ್ ಬಾದ,ಕೂಡಲಿಯಿಂದ ಕೊಡ್ಲಾ ಆ ಯಿತು,ಹೀಗೆ ಅನೇಕ ವಿವರಣೆಗಳು ಮೂಗಿನಮೇಲೆ ಬೆರಳಿಡುವಂತೆ, ಕೇಳಿದರೆ ಅನೇಕರು ಹುಬ್ಬೇರಿಸುವಂತಿವೆ ಆಸಕ್ತಿದಾಯಕವಾದ ಕುತೂಹಲಗಳಿಗೆ, ಸಂಶೋಧಕರಿಗೆ, ಇತಿಹಾಸಕಾರರಿಗೆ ಈ ಕೃತಿ ಕೈದೀವಿಗೆಯಾಗಿದೆ.
©2024 Book Brahma Private Limited.