‘ಗಡಿನಾಡ ದೀಪ ಉಬ್ರಂಗಳ ಪದ್ಮನಾಭ ಕುಣಿಕುಳ್ಳಾಯ’ ಕಾಂತಾವರ ಕನ್ನಡ ಸಂಘದ ಮಹತ್ವದ ಯೋಜನೆ ನಾಡಿಗೆ ನಮಸ್ಕಾರ ಶತಮಾನೋತ್ತರರ ಮಾಲಿಕೆಯಲ್ಲಿ ಪ್ರಕಟವಾದ ಕೃತಿ. ಈ ಮಾಲಿಕೆಯ ಸಂಪಾದಕತ್ವವನ್ನು ಹಿರಿಯ ಲೇಖಕ ಡಾ.ನಾ. ಮೊಗಸಾಲೆ ವಹಿಸಿಕೊಂಡಿದ್ದರು. ಈ ಕೃತಿಯನ್ನು ಲೇಖಕ ಡಾ. ರಾಧಾಕೃಷ್ಣ ಬೆಳ್ಳೂರು ರಚಿಸಿದ್ದಾರೆ. ದಕ್ಷಿಣ ಕನ್ನಡ (ಉಡುಪಿ ಮತ್ತು ಕಾಸರಗೋಡು ಸೇರಿದ ಅವಿಭಜಿತ ಜಿಲ್ಲೆ) ಧಾರ್ಮಿಕ, ನೈತಿಕ, ಸಾಹಿತ್ಯಿಕ, ಸಾಂಸ್ಕೃತಿಕ ಅಧಃಪತನವಾಗದಂತೆ ಸದಾ ಎಚ್ಚರಿಕೆಯಿಂದಿರುವ ಒಂದು ನಾಡು. ಇಲ್ಲಿನ ಬಹುಮುಖೀ ಸಂಸ್ಕೃತಿಯ ನಿರ್ಮಾಣಕ್ಕಾಗಿ ದುಡಿದು ಕೀರ್ತಿಶೇಷರಾಗಿರುವ ಮತ್ತು ಈಗಲೂ ನಮ್ಮ ನಡುವೆ ಇರುವ ವಿದ್ವಾಂಸರು, ಚಿಂತಕರು, ಸಾಹಿತಿಗಳು, ಯಕ್ಷಗಾನ ಸಾಹಿತಿಗಳು ಹಾಗೂ ಕಲಾವಿದರು, ವರ್ಣಚಿತ್ರ ಕಲಾವಿದರು, ಶಿಲ್ಪಿಗಳು, ದಾರುಶಿಲ್ಪಿಗಳು, ವಿವಿಧ ಕ್ಷೇತ್ರಗಳನ್ನು ಪ್ರತಿನಿಧಿಸುವ ಸಮಾಜಸೇವಕರು, ಶಿಕ್ಷಕರು, ಅಭಿವೃದ್ಧಿಯ ಹರಿಕಾರರು, ಕೃಷಿ ಋಷಿಗಳು, ವೈದ್ಯರು ಮುಂತಾದವರ ಸಾಧನೆಗಳನ್ನು ದಾಖಲಿಸುವುದು ಸಮಾಜದ ಕರ್ತವ್ಯ ಎನ್ನುತ್ತಾರೆ ಲೇಖಕ ಡಾ.ಬಿ. ಜನಾರ್ದನ ಭಟ್. ಈ ಕೃತಿಯ ಸಂಪಾದಕೀಯದಲ್ಲಿ ಕೃತಿಯ ಕುರಿತು ಬರೆದಿರುವ ಅವರು ಗಡಿನಾಡ ದೀಪ ಉಬ್ರಂಗಳ ಪದ್ಮನಾಭ ಕುಣಿಕುಳ್ಳಾಯ ಅವರ ಕುರಿತಾದದ ಈ ಕೃತಿಯನ್ನು ಬರೆದುಕೊಟ್ಟು ಮಾಲೆಯ ಮಹತ್ವವನ್ನು ಹೆಚ್ಚಿಸಿದ ಡಾ. ರಾಧಾಕೃಷ್ಣ ಬೆಳ್ಳೂರು ಅವರಿಗೆ ಸಂಘವು ಋಣಿಯಾಗಿದೆ ಎಂದಿದ್ದಾರೆ.
©2024 Book Brahma Private Limited.