ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ಡಾ. ರಾಧಾಕೃಷ್ಣ ಬೆಳ್ಳೂರು ಅವರು 'ತುಳು ಛಂದಸಿನ ವಿಮರ್ಶಾತ್ಮಕ ಅಧ್ಯಯನ' ಅವರ ಪಿಎಚ್.ಡಿ. ಸಂಪ್ರಬಂಧ. ಕಣ್ಣೂರು ವಿಶ್ವವಿದ್ಯಾಲಯದ ಸಂಶೋಧನ ಮಾರ್ಗದರ್ಶಕರೂ ಕನ್ನಡ ಅಧ್ಯಯನ ಮಂಡಳಿ ಮತ್ತು ಪರೀಕ್ಷಾ ಮಂಡಳಿಯ ಅಧ್ಯಕ್ಷರೂ ಆಗಿರುವ ಡಾ. ಬೆಳ್ಳೂರು, ಮುಂಡೂರು, ಮುಗಿಲ ನೆರಳಿನ ಬದುಕು, ಅಜಿಹ್ವಾ, ಭಾಷಣ ಕಲೆ, ಕರಾಡ ಉಪಭಾಷೆ, ತುಳು ಛಂದಸ್ಸು, ಶಬ್ದ ಸೂತಕ, ತುಳು ಲಿಪಿ ಪರಿಚಯ ಮುಂತಾಗಿ ಇಪ್ಪತ್ತರಷ್ಟು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಅವರು ಪ್ರಾಚೀನ ತುಳು ಶಾಸನಗಳು ಮತ್ತು ತಾಳೆಯೋಲೆಗಳ ಬಗ್ಗೆ ವಿಶೇಷ ಅಧ್ಯಯನ ನಡೆಸಿದ್ದಾರೆ. ಕರಾಡ ಮತ್ತು ನಾಯ್ಕ ಮರಾಠಿಯ ಶಬ್ದಕೋಶಗಳನ್ನು ತಯಾರಿಸಿದ್ದಾರೆ. ನಾಡಿಗೆ ನಮಸ್ಕಾರ ಮಾಲಿಕೆಯಲ್ಲಿ ಹಿರಿಯ ಬಲಿಪ ನಾರಾಯಣ ಭಾಗವತ ಮತ್ತು ಯು.ಪಿ. ಕುಣಿಕುಳ್ಳಾಯ ಎಂಬ ಎರಡು ಕೃತಿಗಳು ಪ್ರಕಟವಾಗಿವೆ.