ಕಾಂತಾವರ ಕನ್ನಡ ಸಂಘದ 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 256ನೇ ಕೃತಿಯಿದು. ಡಾ. ಟಿ.ಎ. ಬಾಲಕೃಷ್ಣ ಅಡಿಗ ಅವರು ಜೀವಶಾಸ್ತ್ರದ ವಿಶ್ವಕೋಶ, ಶಿಕ್ಷಣತಜ್ಞ ಎಂದು ಚಿರಪರಿಚಿತರು. ಶಿಕ್ಷಣತಜ್ಞರಾಗಿ, ವಿಜ್ಞಾನ ಲೇಖಕರಾಗಿ, ಪ್ರಗತಿಪರ ಚಿಂತಕರಾಗಿ, ಸಂಪನ್ಮೂಲ ವ್ಯಕ್ತಿಯಾಗಿ, ವಿಜ್ಞಾನ ವಿಷಯಗಳ ಕೃತಿರಚಕರಾಗಿ, ನಾಡಿನಾದ್ಯಂತ ಸುಪರಿಚಿತರು ಡಾ. ಟಿ.ಎ. ಬಾಲಕೃಷ್ಣ ಅಡಿಗ, ಅವರು ನಾಡು, ನುಡಿ, ಸಂಸ್ಕೃತಿ, ಸಾಹಿತ್ಯ, ಶಿಕ್ಷಣಕ್ಕೆ ತನ್ನದೇ ಆದ ಕಾಣಿಕೆ ನೀಡಿದವರು. ಅಧ್ಯಾಪಕರಾಗಿ, ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯರಾಗಿ, ಸಾಹಿತಿಗಳಾಗಿ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡಿದವರು. ಅಡಿಗರ ಜೀವನ ಸಾಧನೆಯನ್ನು ಈ ಕೃತಿಯು ಪರಿಚಯಿಸುತ್ತದೆ.
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿರುವ ನೀಲಾವರ ಸುರೇಂದ್ರ ಅಡಿಗರು ಶಿಕ್ಷಣ, ಸಾಹಿತ್ಯ, ಸಂಘಟನೆಯಲ್ಲಿ ತಮ್ಮ ಛಾಪು ಮೂಡಿಸಿದವರು. ಅವರ ಐವತ್ತೈದು ಪುಸ್ತಕಗಳು ಪ್ರಕಟವಾಗಿವೆ. ಶೈಕ್ಷಣಿಕವಾಗಿ ಪಠ್ಯಪುಸ್ತಕರಹಿತ ಕಲಿಕೆಯ ಚಿಂತನೆ, ಅನುಷ್ಠಾನವೇ ಮೊದಲಾದ ಪ್ರಗತಿಪರ ಚಿಂತಕರು, ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ, ಸಾಹಿತಿಗಳಾಗಿ, ಉತ್ತಮ ವಾಗ್ಮಿಯೂ ಹೌದು. ಸಂಘಟಕರಾಗಿ ನಾಡಿನಾದ್ಯಂತ ಶಿಕ್ಷಕರಿಗೆ, ಸಹೃದಯರಿಗೆ ಪರಿಚಿತರು. ಇವರ ’ಕಿಟ್ಟಜ್ಜಿ ಮತ್ತು ಹವಿಸ್ಸು ಪಾತ್ರೆ’ ಈ ಪುಸ್ತಕ ಹತ್ತು ವರ್ಷಗಳ ಕಾಲ ICSE ಶಾಲೆಯ ಹತ್ತನೆಯ ತರಗತಿಗೆ ಪಠ್ಯಪುಸ್ತಕವಾಗಿತ್ತು. ಬೋಧನೆ ಮತ್ತು ಕಲಿಕೆಯ ಸಾಮಗ್ರಿ ’ಹೊಸ ದಿಶೆಯ ಬೆಳಕು’ ಕೃತಿಯನ್ನು ...
READ MORE