ಬಸವಾದಿ ಶರಣ ಪರಂಪರೆಯ ಛಾಯೆಯಲ್ಲಿ ಕಾಯಕವನ್ನು ತಾದಾತ್ಮ್ಯತೆಯಿಂದ ಮಾಡುತ್ತಾ ಬಂದ ದೊಡ್ಡಪ್ಪ ಅಪ್ಪನವರ ಬದುಕು ಪ್ರಸ್ತುತ ಪೀಳಿಗೆಯವರಿಗೆ ಆದರ್ಶವಾಗುವಂತಹದು. ಕೃಷಿ ಕಾಯಕ ಜೀವಿಯಾಗಿ ಬಡವರ ದಾಸ್ಯದ ಕತ್ತಲೆ ಕಳೆಯಲು ಶಿಕ್ಷಣದ ದೀಪ ಹಚ್ಚಿ, ಇವರು ಸ್ವಾತಂತ್ರ್ಯ ಸಂಗ್ರಾಮಕ್ಕೆ ನಾಂದಿ ಹಾಡಿದವರು. ಇವರ ಬದುಕನ್ನು , ಜೀವನ ಸಾಧನೆಯನ್ನು, ಪರಿಚಯವನ್ನು ಲೇಖಕರು ಈ ಕೃತಿಯಲ್ಲಿ ಮಾಡಿದ್ದಾರೆ.
ಎಂ. ಎಸ್. ಹಿರೇಮಠ ಅವರು ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ನಿಂಬರಗಿಯಲ್ಲಿ 1956 ಜುಲೈ 22 ಜನಿಸಿದರು. ತಂದೆ ಪುರಾಣರತ್ನ ಮಹಾಂತಸ್ವಾಮಿ. ತಾಯಿ ನೀಲಮ್ಮ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ತಮ್ಮ ಹುಟ್ಟಿದೂರಿನಲ್ಲೇ ಪೂರೈಸಿದ ಅವರು ಬಿ. ಎ. ಪದವಿಯನ್ನು ಕಲಬುರಗಿಯ ಶ್ರೀ ಬಸವೇಶ್ವರ ಮಹಾವಿದ್ಯಾಲಯದಲ್ಲಿ ಪಡೆದರು. ಕಲಬುರಗಿಯ ಕರ್ನಾಟಕ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರದಲ್ಲಿ ಚಿನ್ನದ ಪದಕದೊಂದಿಗೆ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ‘ಶರಣಬಸವೇಶ್ವರರು ಹಾಗೂ ಅವರ ಪರಿಸರದ ಸಾಹಿತ್ಯ’ ಇವರ ಪಿಎಚ್.ಡಿ ಮಹಾಪ್ರಬಂಧ. ರಂಗಭೂಮಿಯಲ್ಲೂ ಆಸಕ್ತಿ ಹೊಂದಿದ್ದ ಹಿರೇಮಠರು ಬೆಂಗಳೂರಿನ ಆದರ್ಶ ಫಿಲಂ ಚಲನಚಿತ್ರ ...
READ MORE