ಬೆರಗಿನ ಬೆಳಕು- ಗುರುರಾಜ ಕರಜಗಿ ಅವರು ಮಂಕುತಿಮ್ಮನ ಕಗ್ಗದ ಚೌಪದಿಗಳ ಕುರಿತು ಅರ್ಥವಿವರಣೆಯನ್ನು ಪ್ರಜಾವಾಣಿಯಲ್ಲಿ ಅಂಕಣಗಳ ಮೂಲಕ ನೀಡುತ್ತಿದ್ದ ಬರಹಗಳ ಸಂಕಲನ. ಕಗ್ಗದ ನವನೀತ ಎಂಬುದು ಕೃತಿಯ ಉಪಶೀರ್ಷಿಕೆ ಆಗಿದೆ. ಭಾಗ -2ರ ಕೃತಿ ಇದು. ಖ್ಯಾತ ವಿದ್ವಾಂಸ ಡಿ.ವಿ. ಗುಂಡಪ್ಪನವರು ಮಂಕುತಿಮ್ಮನ ಕಗ್ಗ ಕೃತಿಯ ಮೂಲಕ ಜೀವನಾಮೃತದ ಚೌಪದಿಗಳನ್ನು ರಚಿಸಿದ ಖ್ಯಾತಿ ಅವರಿಗಿದೆ. ಈ ಚೌಪದಿಗಳು ಬದುಕಿನ ಸತ್ಯವನ್ನು, ಸೌಂದರ್ಯವನ್ನು ತೋರುತ್ತವೆ. ಅದನ್ನು ಅನುಭವಿಸುವ ಬಗೆಯನ್ನೂ ತಿಳಿಸಿಕೊಡುತ್ತವೆ. ಈ ಚೌಪದಿಗಳನ್ನು ಅರ್ಥೈಸಿ, ವಿವರಿಸುವುದು ಅಂಕಣದ ವಿಶೇಷವಾಗಿತ್ತು. ಈ ಎಲ್ಲ ಅಂಕಣ ಬರಹಗಳನ್ನು ಸಂಗ್ರಹಿಸಿ, ಸಂಪಾದಿಸಿದ ಕೃತಿ-ಬೆರಗಿನ ಬೆಳಕು.
©2024 Book Brahma Private Limited.