ಸಾಮಾಜಿಕ ಸಮಸ್ಯೆಗಳನ್ನು ಹೆಚ್ಚಾಗಿ ಧ್ಯಾನಿಸಿ ಅವುಗಳಿಗೆ ಪರಿಹಾರ ಕಂಡುಕೊಳ್ಳಬೇಕಾದ ವಿಚಾರಗಳ ಸುತ್ತ ಚರ್ಚಿಸುವ ಸಾಮಾಜಿಕ ಕಾರ್ಯಕರ್ತೆ ಕೆ. ನೀಲಾ ಅವರ ’ಬಾಳ ಕೌದಿ’ ಲೇಖನಗಳ ಸಂಗ್ರಹ. ಇಲ್ಲಿ ಜರುಗಿದ ಕತೆಗಳಿವೆ, ವ್ಯಕ್ತಿ ಚಿತ್ರಣಗಳಿವೆ, ಸಾಮಾಜಿಕ ಸಂಗತಿಗಳ ಚರ್ಚೆ ಇದೆ. ಅಸಮಾನತೆ ವಿರುದ್ಧ ಪ್ರತಿಭಟಿಸುವ, ಜೀವಪರತೆಗೆ ಮಿಡಿಯುವ ಇಲ್ಲಿನ ಲೇಖನಗಳು ಪ್ರಗತಿಪರ ವಿಚಾರಧಾರೆ ಹೇಗೆ ಅಸ್ವಸ್ಥ ಸಮಾಜಕ್ಕೆ ಮದ್ದಾಗಲಿದೆ ಎಂಬುದನ್ನು ಹೇಳುತ್ತದೆ. ಕೃತಿಯಲ್ಲಿ ಮುಖ್ಯವಾಗಿ ಗಮನಿಸಬೇಕಿರುವುದು ಬೀದರಿನ ಜವಾರಿ ಭಾಷೆ. ಆ ಭಾಷೆ ಕೃತಿಗೆ ಮತ್ತಷ್ಟು ಲವಲವಿಕೆ ತಂದಿದೆ. ಆಡುಮಾತು ಚಂದನೆ ಆಟವಾಡಿದೆ.
ಕರುಳಿಲ್ಲದವರ ನಡುವೆ, ಕೂಲಿಯ ಕದಿಯುವ ಕುಲವೆಲ್ಲ, ಒಡೆದ ಗ್ಲಾಸು ಬೆಸೆದ ಹೃದಯ ಮುಂತಾದವು ಪ್ರಮುಖ ಬರಹಗಳು. ಹಲವು ಬಟ್ಟೆಗಳನ್ನು ಹೊಲಿದು ಮಾಡಿದ್ದು ಕೌದಿ. ಅಂತಹ ಕೌದಿಗೆ ಹಲವು ರಂಗುಗಳಿವೆ. ’ಬಾಳ ಕೌದಿ’ಯೂ ಸಮಾಜದ ಹಲವು ರಂಗುಗಳಿಂದ ಮಿಂದೆದ್ದು ಬಂದಿದೆ. ಆ ’ಬಹುವರ್ಣ’ ಪುಸ್ತಕದ ಧೀಶಕ್ತಿ ಕೂಡ.
©2024 Book Brahma Private Limited.