ಬಿ. ರಾಚಯ್ಯ ಅವರು ನಾನಾ ಇಲಾಖೆಗಳ ಸಚಿವರಾಗಿ ಮಾಡಿರುವ ಕಾರ್ಯಗಳು ರಾಜಕೀಯ ಕ್ಷೇತ್ರದಲ್ಲಿ ಪ್ರಮುಖವಾದವು. ಬಿ. ರಾಚಯ್ಯ ಅವರು ಸೌಮ್ಯವಾದಿಯಾದರೂ, ತಾವು ಮಾಡಬೇಕೆಂದುಕೊಂಡಿರುವ ಕೆಲಸದ ವಿಚಾರದಲ್ಲಿ ಸಾಕಷ್ಟು ನಿಷ್ಠುರ ನಿಲುವುವನ್ನು ಪಡೆದು, ಸಮಾಜದ ಒಳಿತಿಗೆ ಶ್ರಮಿಸುತ್ತಿದ್ದರು. ಅದರಲ್ಲೂ ದಲಿತ, ಹಿಂದುಳಿದ ಶೋಷಿತ ವರ್ಗದವರ ಮೇಲೆ ರಾಚಯ್ಯ ಅವರಿಗೆ ಇದ್ದ ಕಾಳಜಿ ಅನನ್ಯವಾದುದು. ಹೀಗಾಗಿ ಅವರು ಶೋಷಿತ ವರ್ಗದವರಿಗೆ ಸಾವಿರಾರು ಎಕರೆ ಭೂಮಿಯನ್ನು ನೀಡಿ, ಆ ಸಮುದಾಯದವರ ಕೃಷಿಗೆ ಅವಕಾಶ ಕಲ್ಪಿಸಿಕೊಟ್ಟರು ಹೀಗೆ ಸಾಮಾಜಿಕವಾಗಿಯೂ,ರಾಜಕೀಯವಾಗಿಯೂ ಬಿ.ರಾಚಯ್ಯ ಅವರು ಬೆಳೆದು ಬಂದ ರೀತಿ, ಮಾಡಿರುವ ಕಾರ್ಯಸಾಧನೆಗಳ ಬಗ್ಗೆ ಪುಸ್ತಕ ಉತ್ತಮ ಮಾಹಿತಿ ನೀಡುತ್ತದೆ.
ನಾಗೇಶ್ ಸೋಸ್ಲೆ ಅವರು ಸೂಕ್ಷ್ಮಸಂವೇದನಾ ಮನೋಭಾವದ ಕವಿತೆಗಳನ್ನು ಕಟ್ಟುವಲ್ಲಿ ತೊಡಗಿಕೊಂಡವರು. ಮನಸ್ಸುಗಳು , ಭೃಂಗ ಚೈತ್ರ, ಗೊಂಡೆದಾರ, ಕವನ ಸಂಕಲನಗಳನ್ನು ಹೊರತಂದಿದ್ಧಾರೆ. ಕಥೆ,ನಾಟಕ,ಲೇಖನ ಬರಹ, ಪ್ರವಾಸ ಕಥನ, ವ್ಯಕ್ತಿ ಪರಿಚಯ ಹೊರ ತರುವಲ್ಲಿ ತೊಡಗಿಕೊಂಡಿದ್ದಾರೆ. ರಂಗತರಂಗ, ವರ್ಣಸಿಂಚನ ಕಲಾವಿದರು, ಆಸರೆ ಸಂಸ್ಥೆ,ಕನ್ನಡ ಸಾಹಿತ್ಯಪರಿಷತ್ತು ಸೇರಿದಂತೆ ಅನೇಕ ಸಂಘ ಸಂಸ್ಥೆಗಳಲ್ಲಿ ಸಕ್ರಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ಧಾರೆ. ...
READ MORE