ಕವಿ, ಕಥೆಗಾರ, ಕಾದಂಬರಿಕಾರ, ಅನುವಾದಕ ಡಾ. ಕೆ.ವಿ. ತಿರುಮಲೇಶ್ ಅವರ ‘ಅಕ್ಷರ ಲೋಕದ ಅಂಚಿನಲ್ಲಿ’ ಎಂಬುದು ಅಂಕಣ ಬರಹವಾಗಿದೆ. ‘ಮರೆತ ಮಾತು, ಮರೆಯಾಗದ ನೆನಪು’ ಎಂಬ ಉಪಶೀರ್ಷಿಕೆ ಇದೆ. ಸಾಹಿತ್ಯ ವಿವಿಧ ಪ್ರಕಾರಗಳಲ್ಲಿ ತಮ್ಮ ವಿಶೇಷ ಪ್ರಯೋಗಶೀಲತೆಯನ್ನು ತೋರಿಸಿರುವ ಲೇಖಕರು, ಮನುಷ್ಯ-ಭಾಷೆ- ಸಂಬಂಧಗಳ ಬಗೆಗೆ ತಮ್ಮ ಬರಹಗಳಲ್ಲಿ ಒತ್ತು ನೀಡಿದ್ದಾರೆ. ತಿರುಮಲೇಶ್ ಅವರು ಕಾಸರಗೋಡಿನ ಹಳ್ಳಿಯೊಂದರಲ್ಲಿ ಹುಟ್ಟಿ ಬೆಳೆದ್ದಿದ್ದರಿಂದ ಅಲ್ಲಿನ ಬಹು ಹಾಗೂ ಮಿಶ್ರ ಹಾಗೂ ವೈವಿಧ್ಯಮಯ ಸಂಸ್ಕೃತಿಗೆ ಒತ್ತು ನೀಡಿ ಬರವಣಿಯನ್ನು ಪ್ರದರ್ಶಿಸಿದ್ದಾರೆ.
ಈ ಕೃತಿಯ ಒಳಪುಟಗಳಲ್ಲಿ ಲೇಖಕ ಕೆ.ವಿ. ತಿರುಮಲೇಶ್ ಅವರೇ ಬರೆದಿರುವಂತೆ ಸಣ್ಣ ಸಣ್ಣ ಗುಂಪುಗಳ ಬೆಳವಣಿಗೆಗೆ ಗೋಡೆಗಳು ಬೇಕು, ಗೋಡೆಗಳೆಂದರೆ ಸ್ವಾಯತ್ತತೆ, ಆದರೆ ಅವು ಸೆರೆಮನೆಗಳಾಗಬಾರದು. ಒಂದು ಮನೆ ಎಂದ ಮೇಲೆ ಬಾಗಿಲು ಬೇಕೇ ಬೇಕು—ಹೊರ ಹೋಗುವುದಕ್ಕೆ ಹೇಗೋ ಹಾಗೆ ಒಳ ಬರುವುದಕ್ಕೆ. ಸಂಕರ ಸ್ಥಿತಿ ಯಾವುದೇ ಚಲನಶೀಲ ಬದುಕಿಗೆ ಅನಿವಾರ್ಯ. ಹೀಗೆ ಕಾಸರಗೋಡಿನವರು ಒಂದು ರೀತಿಯಲ್ಲಿ ಉದಾರವಾದಿಗಳು, ಬುದ್ಧನ ಮಧ್ಯಮ ಮಾರ್ಗಿಗಳು. ತಂತಿಯನ್ನು ಅತಿಯಾಗಿ ಬಿಗಿಯಬೇಡಿ ಕಡಿದೀತು, ಅತಿಯಾಗಿ ಸಡಿಲಿಸಬೇಡಿ, ಸ್ವರ ಹೊರಡದೇ ಇದ್ದೀತು. ಹೀಗೆಂದು ಬುದ್ಧನಿಗೆ ಹೇಳಿದವರು ದಾರಿಹೋಕ ಹೆಂಗಸರಲ್ಲದೆ ಯಾವ ಮಹಾಜ್ಞಾನಿಗಳೂ ಅಲ್ಲ! ಎಂಬ ಸಾಲುಗಳು ಸಾಹಿತ್ಯಾಸಕ್ತರನ್ನು ಇನ್ನಷ್ಟು ಸಮೀಪಿಸುವಂತೆ ಮಾಡಿದೆ.
ಹಲವು ದರ್ಶನಗಳ ‘ಬೌದ್ಧಿಕ ಆತ್ಮಚರಿತ್ರೆ’(ಪ್ರಜಾವಾಣಿ)
©2024 Book Brahma Private Limited.