ಡಾ. ವಿಜಯಶ್ರೀ ಸಬರದ ಅವರು ರಚಿಸಿರುವ ‘ಅಕ್ಕಮಹಾದೇವಿ’ ಕೃತಿಯು ಅಕ್ಕಮಹಾದೇವಿಯ ಜನನ ಮದುವೆಗೆ ಸಂಬಂಧಿಸಿದ ಜೀವನ ಚರಿತ್ರೆಯ ಜತೆಗೆ ಅಕ್ಕನ ವಚನಗಳ ಅಧ್ಯಯನವನ್ನು ಹಾಗೂ ಅಕ್ಕನನ್ನು ಕುರಿತು ಇದುವರೆಗೆ ಬಂದ ಕೃತಿಗಳನ್ನ ಅಧ್ಯಯನ ಮಾಡಿ ಈ ಕೃತಿಯನ್ನು ರಚಿಸಿದ್ದಾರೆ. ಈ ಕೃತಿಯಲ್ಲಿ ಅಕ್ಕಮಹಾದೇವಿಯ ಜೀವನ ಚರಿತ್ರೆಯನ್ನು ಎರಡು ಭಾಗಗಳಲ್ಲಿ ವಿಭಾಗಿಸಲಾಗಿದೆ. ಮೊದಲ ಭಾಗದಲ್ಲಿ ಅಕ್ಕನ ವಚನಗಳ ಅಧ್ಯಯನ ಶೀರ್ಷಿಕೆಯಡಿಯಲ್ಲಿ ಅಕ್ಕಮಹಾದೇವಿಯ ಜನನ, ಅಕ್ಕಮಹಾದೇವಿಯ ಮದುವೆ, ಅಕ್ಕಮಹಾದೇವಿ ಕುರಿತ ಕೃತಿಗಳು, ವಚನಗಳ ಅಧ್ಯಯನದ ಪ್ರವೇಶಿಕೆ, ಅಕ್ಕಮಹಾದೇವಿ ಮತ್ತು ಅನುಭವ ಮಂಟಪ, ಸ್ಫೋಟಗುಣ, ಆತ್ಮಶೋಧನೆ, ಕಾವ್ಯಸೌಂದರ್ಯ, ಅನುಭಾವ ಸಂಕಲನಗೊಂಡಿದ್ದರೆ. ಭಾಗ ಎರಡರಲ್ಲಿ ಅಕ್ಕನ ಕುರಿತ ಕೃತಿಗಳ ಅಧ್ಯಯನ ಶೀರ್ಷಿಕೆಯಡಿಯಲ್ಲಿ ವಚನಕಾರರ ದೃಷ್ಟಿಯಲ್ಲಿ ಅಕ್ಕಮಹಾದೇವಿ, ಹರಿಹರನ ಮಹಾದೇವಿಯಕ್ಕನ ರಗಳೆ, ಶೂನ್ಯ ಸಂಪಾದನೆಗಳಲ್ಲಿ ಮಹಾದೇವಿಯಕ್ಕನ ಪರೀಕ್ಷೆ, ಜನಪದ ಸಾಹಿತ್ಯದಲ್ಲಿ ಮಹಾದೇವಿಯಕ್ಕ, ಆಧುನಿಕ ಕಾವ್ಯದಲ್ಲಿ ಅಕ್ಕಮಹಾದೇವಿ, ಹಾಗೂ ಸಮಾರೋಪ ಲೇಖನಗಳು ಸಂಕಲಗೊಂಡಿವೆ ಕೊನೆಯ ಅನುಬಂಧದಲ್ಲಿ ಡಾ.ವಿಜಯಶ್ರೀಯವರ ಪ್ರಕಟಿತ ಕೃತಿಗಳ ವಿವರಗಳನ್ನು ನೀಡಲಾಗಿದೆ.
ಮಹಿಳೆಯರ ಶೋಷಣೆ ಮತ್ತು ಸ್ತ್ರೀಯರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ತಮ್ಮ ಖಚಿತ ಅಭಿಪ್ರಾಯ ಮಂಡಿಸುವ ಲೇಖಕಿ ವಿಜಯಶ್ರೀ ಸಬರದ. ಅವರು ಜನಿಸಿದ್ದು 1957ರ ಫೆಬ್ರುವಿರ 1ರಂದು. ತಂದೆ ಗುಣವಂತರಾವ ಪಾಟೀಲ. ತಾಯಿ ಸಂಗಮ್ಮ. ಪ್ರಾರಂಭಿಕ ಶಿಕ್ಷಣ ಹಾಗೂ ಕಾಲೇಜು ಪದವಿ ಶಿಕ್ಷಣವನ್ನು ಬೀದರ್‌ನಲ್ಲಿ ಪಡೆದ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು. ’ಅನುಪಮಾ ನಿರಂಜನರ ಕಾದಂಬರಿಗಳು; ಒಂದು ಅಧ್ಯಯನ” ಎಂಬ ಪ್ರಬಂಧ ಮಂಡಿಸಿ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಪಡೆದ ಪಿಎಚ್.ಡಿ. ಪದವಿ ಪಡೆದರು. ಬೀದರ್‌ನ ಅಕ್ಕ ಮಹಾದೇವಿ ಮಹಿಳಾ ವಿದ್ಯಾಲಯದಲ್ಲಿ ಉಪನ್ಯಾಸಕಿಯಾಗಿ ವೃತ್ತಿ ಜೀವನ ಆರಂಭಿಸಿದ ಅವರು ನಂತರ ...
READ MORE