ಕವಯತ್ರಿ ನಳಿನ ಡಿ. ಅವರು 1982 ಆಗಸ್ಟ್ 16 ರಂದು ಚಿಕ್ಕಮಂಗಳೂರಿನಲ್ಲಿ ಜನಿಸಿದರು. ಕನ್ನಡಪ್ರಭದ 'ಬೈಟು ಕಾಫಿ'ಗೆ ’ದೋಣಿ ವಿಭಾ’ಕ್ಕೆ ಹಲವಾರು ಪ್ರಮುಖ ಕವಿಗಳ ಸಂದರ್ಶನ ಮಾಡಿದ್ದಾರೆ. ಅವರ ಮಹಿಳಾ ಪರವಾದ ಹತ್ತಾರು ಲೇಖನಗಳನ್ನು ಕನ್ನಡದ ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 'ಭಾವ-ಬೆಳಕು' ಅಂಕಣ ಸುವರ್ಣ ಟೈಮ್ಸ್ ಆಫ್ ಕರ್ನಾಟಕದಲ್ಲಿ ಪ್ರಕಟವಾಗಿತ್ತು. ರೆಡ್ ಲೈಟ್ ಮತ್ತಿತರ ಕವನಗಳು ಎಂಬ ಪುಸ್ತಕವು ಕನ್ನಡ ಪುಸ್ತಕ ಪ್ರಾಧಿಕಾರದ ಪ್ರೋತ್ಸಾಹ ಧನ ಪಡೆದು ಪ್ರಕಟವಾಗಿದೆ. ಕರ್ನಾಟಕ ಲೇಖಕಿಯರ ಸಂಘದಿಂದ ಗುಡಿಬಂಡೆ ಪೂರ್ಣಿಮಾ ದತ್ತಿನಿಧಿ ಬಹುಮಾನ ಪ್ರಶಸ್ತಿ ಲಭಿಸಿದೆ.