ಮಲ್ಲಿಕಾರ್ಜುನ ಕಡಕೋಳ ಅವರ ಅಂಕಣ ಬರಹಗಳ ಕೃತಿ ’ಯಡ್ರಾಮಿ ಸೀಮೆ ಕಥನಗಳು’. ಬಟಾಬಯಲ ಬದುಕಿನ ಅಸದಳ ಸಂಕಟ, ಅಸಹಾಯಕತೆಗೆ ಕಾರಣರಾದ ಆಳರಸರ ದರ್ಪ-ದಬ್ಬಾಳಿಕೆ, ಪುರೋಹಿತಶಾಹಿ, ಜಮೀನ್ದಾರಿ ವ್ಯವಸ್ಥೆಯ ಕ್ರೌರ್ಯಗಳನ್ನು ಅನಾವರಣಗೊಳಿಸುವ ಪ್ರಯತ್ನವನ್ನು ಮಲ್ಲಿಕಾರ್ಜುನ ಅವರು ಈ ಕೃತಿಯಲ್ಲಿ ಮಾಡಿದ್ದಾರೆ. ತಣ್ಣಗಿನ ಜಾತಿ ಕ್ರೌರ್ಯದ ಆಳ, ಜಮೀನ್ದಾರಿ ವ್ಯವಸ್ಥೆಯಡಿ ಸಿಲುಕಿ ನರಳುವ ಜನರ ಬದುಕು, ನೋವು, ಅಸಹಾಯಕತೆಯನ್ನು ಲೇಖಕರು ವಿವರಿಸಿದ್ದಾರೆ. ಕಾಲ ಬದಲಾದಂತೆ ಜಾತಿ ವ್ಯವಸ್ಥೆಯೂ ತನ್ನ ಕರಾಳ ರೂಪವನ್ನು ಬದಲಿಸುತ್ತಿದೆ. ಪುರುಷಾಧಿಪತ್ಯ ಹಾಗೂ ಪುರೋಹಿತಶಾಹಿ ಧೋರಣೆಯ ಜಮೀನ್ದಾರಿ ಪದ್ಧತಿಯ ಹಿಂದಿನ ಕರಾಳ ಮುಖಗಳು ಈ ಕೃತಿಯಲ್ಲಿ ಅನಾವರಣಗೊಂಡಿವೆ.
©2024 Book Brahma Private Limited.