ಈ ಕೃತಿ ಬಹಳ ವಿಶಿಷ್ಟವಾದದ್ದು, 01 ಅಗಷ್ಟ್ 2011 ರಂದು ಜ್ಯೇಷ್ಠ ಸಮಾಜಸೇವಕ ಅಣ್ಣಾ ಹಜಾರೆಯವರು ದಿಲ್ಲಿಯ ಜಂತರ್ ಮಂತರ್‌ನಲ್ಲಿ ಜನಲೋಕಪಾಲ ಕಾನೂನು ರಚನೆಯ ಸಲುವಾಗಿ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದರು. ಇದೇ ಹೊತ್ತಿಗೆ ಅಣ್ಣಾ ಹಜಾರೆಯವರ ಕುರಿತ ಈ ಕೃತಿ ಪ್ರಕಟಣೆಯ ಹಂತದಲ್ಲಿತ್ತು. 16 ಅಗಷ್ಟ್ 2011 ರಂದು ಪೋಲಿಸರು ಅಣ್ಣಾ ಹಜಾರೆಯವನ್ನು ಬಂಧಿಸಿದರು. ನಂತರ 20 ಅಗಷ್ಟ್ 2011 ರಂದು ದಿಲ್ಲಿಯ ಜೈಲು ಪ್ರಶಾಸನವು ಯಾವುದೇ ಜಾಮೀನು ಇಲ್ಲದೆ ಅಣ್ಣಾ ಹಜಾರೆಯವರನ್ನು ಮುಕ್ತಗೊಳಿಸಿತು. ಈ ಕೃತಿ 22 ಅಗಷ್ಟ್ 2011 ರಂದು ಯು. ಆರ್. ಅನಂತಮೂರ್ತಿಯವರು ಬಿಡುಗಡೆಗೊಳಿಸಿದರು. ಈ ಕೃತಿ ಹಲವಾರು ಮುದ್ರಣ ಕಂಡಿತು. ಇದರಲ್ಲಿ ಹಜಾರೆಯವರ ಬದುಕು, ಸೈನ್ಯದಲ್ಲಿನ ಸೇವೆ, ಆದರ್ಶ ಗ್ರಾಮ ನಿರ್ಮಾಣದ ಕಾರ್ಯಗಳು, ಹಲವಾರು ಕಾನೂನು ರಚನೆಗಳ ಸಲುವಾಗಿ ಸತ್ಯಾಗ್ರಹ, ಆಂದೋಲನ, ಹೋರಾಟ ಇತ್ಯಾದಿಗಳ ಸಮಗ್ರ ನೋಟ ಇದರಲ್ಲಿ ಇದೆ ಹಾಗೂ ಹಜಾರೆಯವರ ಸಂದರ್ಶನವೂ ಇದೆ.
ಗಿರೀಶ್ ಚಂದ್ರಕಾಂತ ಜಕಾಪುರೆ ಅವರು ಕಲಬುರ್ಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಮಾದನ ಹಿಪ್ಪರಗಿಯಲ್ಲಿ ಶಿಕ್ಷಕರಾಗಿದ್ದಾರೆ. ಹಿಂದಿ ಮತ್ತು ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವೀಧರರು. ಕನ್ನಡ, ಹಿಂದಿ, ಮರಾಠಿ, ಇಂಗ್ಲಿಷ್, ಮತ್ತು ಉರ್ದು ಭಾಷೆಯನ್ನು ಬಲ್ಲವರು. ಕಾವ್ಯ, ಕಥಾ ಸಂಕಲನ, ವ್ಯಕ್ತಿಚಿತ್ರ, ಮಕ್ಕಳ ಕಥೆ, ಕಾದಂಬರಿ, ಮಕ್ಕಳ ಪದ್ಯ, ಹಿಂದಿ ಅನುವಾದಗಳು, ಮರಾಠಿ ಕಥೆಗಳ, ಕಾದಂಬರಿಗಳ ಅನುವಾದ, ಪ್ರವಾಸ ಕಥನಗಳು, ಬಿಡಿ ಲೇಖನಗಳು, ಅನುವಾದಿತ ಕಾವ್ಯ ಹೀಗೆ ತಮ್ಮ ಸಾಹಿತ್ಯ ಕೃಷಿಯನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಪ್ರಮುಖ ಕೃತಿಗಳು: ನನ್ನ ದನಿಗೆ ನಿನ್ನ ದನಿಯು, ಮನದ ಮುಂದಣ ಮಾಯೆ (ಗಜಲ್ ಗಳ ಸಂಕಲನ), ಖಾಮೋಶಿ, ಸಾಗರ್ ...
READ MOREಬೇಂದ್ರ ಗ್ರಂಥ ಬಹುಮಾನ 2011