'ವಿಚಾರ ವಿಹಾರ ' ಕೃತಿಯು ಹನಿಯೂರು ಚಂದ್ರೇಗೌಡ ಹಾಗೂ ಲೋಹಿತ್ ಪಿ ಅವರ ಸಂಪಾದಿತ ಸಂಶೋಧನಾ ಗ್ರಂಥ. ಕರ್ನಾಟಕದ ಸರಿಸುಮಾರು 20-25 ವಿಶ್ವವಿದ್ಯಾಲಯಗಳಿಂದ ಏನಿಲ್ಲವೆಂದರೂ ವಾರ್ಷಿಕ 300 ರಿಂದ 400ಕ್ಕೂ ಅಧಿಕ ಸಂಶೋಧನಾ ಪ್ರಬಂಧ ಮಂಡನೆಯಾಗುತ್ತವೆ. ಈ ಸಂಶೋಧನಾ ಕೃತಿಯು ಹಲವಾರು ಬರಹಗಳನ್ನು ಒಳಗೊಂಡಿದೆ. ತೆಲುಗಿನ ಒಂದು ಮಾತಿನಂತೆ, “ ಥೀಸಿ ಥೀಸಿ ರಾಯೋದೇ ಥೀಸಿಸ್” ಅಂದರೆ ’ ಹುಡುಕಿ ಹುಡುಕಿ ಬರೆಯೋದೇ ಥೀಸಿಸ್” ಎಂಬಂತಾಗಿದೆ ಇವತ್ತಿನ ಸಂಶೋಧನಾ ಪ್ರಬಂಧ ಮತ್ತು ಸಂಶೋಧನಾ ಲೇಖನಗಳ ಪರಿಸ್ಥಿತಿ ಎನ್ನುತ್ತಾರೆ ಲೇಖಕರು. ಸರಿಸುಮಾರು ಅರ್ಧಶತಕ ಅವಧಿಯ ಲೇಖಕರ ಬಹುಶಿಸ್ತೀಯ- ಬಹುಭಾಷೀಯ ಲೇಖನಗಳನ್ನು ಇಲ್ಲಿ ಸಂಕಲಿಸಲಾಗಿದೆ.
©2024 Book Brahma Private Limited.