ಭಾರತದ ಸಿದ್ಧ ಸಂಪ್ರಾದಾಯಗಳಲ್ಲಿ ನಾಥ, ಬೌದ್ಧ, ಸೂಫಿಗಳಲ್ಲಿ ಬಹುತೇಕರು ಪಶುಪಾಲನಾ ಮೂಲದಿಂದಲೇ ಬಂದವರು ಎನ್ನುವ ಲೇಖಕರು ವಚನಕಾರ ಮೋನಪ್ಪಯ್ಯನನ್ನು ಸೂಫಿಪಂಥಕ್ಕೆ ಸೇರಿಸುತ್ತಾರೆ. ’ಸೂಫಿ ಎಂದರೆ ಕಂಬಳಿ ಹೊತ್ತವನು’ ಎನ್ನುವ ಲೇಖಕರು ’ಮೋನಪ್ಪಯ್ಯ ಪಂಚಾಳ ಸಮುದಾಯಕ್ಕೆ ಸೇರಿದವ ಎಂದು ಹೇಳಲಾಗುತ್ತಿದ್ದರೂ ಅವನಲ್ಲಿ ಕುರುಬನ ಸರ್ವ ಲಕ್ಷಣಗಳಿವೆ’ ಎಂದು ಅಭಿಪ್ರಾಯಪಡುತ್ತಾರೆ. ಮೋನಪ್ಪಯ್ಯ ಬರೆದದ್ದು ಎಂದು ಹೇಳುವ ವಚನಗಳಲ್ಲಿ ’ಕುರುಬರ ವಾಸನೆ’ ಅಡಗಿದೆ ಎಂಬ ವಿವರಣೆಯನ್ನು ನೀಡುತ್ತಾರೆ.
ಸಾಹಿತಿ, ಸಂಶೋಧಕ ಮತ್ತು ಪತ್ರಕರ್ತರಾಗಿರುವ ಚಂದ್ರಕಾಂತ ಬಿಜ್ಜರಗಿ ಅವರು ವಿದ್ಯುನ್ಮಾನ ವ್ಯವಹಾರ ಕ್ಷೇತ್ರದಲ್ಲಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜಯಪುರ ನಿವಾಸಿಗಳು. ವಿದ್ಯುನ್ಮಾನ ವಿಷಯದಲ್ಲಿ ಡಿಪ್ಲೋಮಾ ಪಡೆದಿದ್ದಾರೆ. ಜ್ಯೋತಿಷ್ಯ ಶಾಸ್ತ್ರ ಮತ್ತು ಸಮ್ಮೋಹನ ಶಾಸ್ತ್ರದಲ್ಲಿ ಅವರಿಗೆ ವಿಶೇಷ ಆಸಕ್ತಿ. ಅವರು ’ಕುರುಬ ದರ್ಪಣ’ ವಾರಪತ್ರಿಕೆಯ ಸಂಪಾದಕರು. ವಿಜಯಪುರ ಜಿಲ್ಲಾ ಕುರಿ ಸಾಕಾಣಿಕೆ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಮಾಜಿ ಉಪಾಧ್ಯಕ್ಷರು & ಹಾಲಿ ನಿರ್ದೇಶಕರು. ಕನಕದಾಸರ ಕುರಿತ ಸಾಕಷ್ಟು ಬಿಡಿ ಲೇಖನಗಳು ವಾರಪತ್ರಿಕೆ ಮತ್ತು ಮಾಸಪತ್ರಿಕೆಗಳಲ್ಲಿ ಮತ್ತು ಸಂಘ-ಸಂಸ್ಥೆಗಳು ಪ್ರಕಟಿಸಿದ ಸ್ಮರಣಸಂಚಿಕೆಗಳಲ್ಲಿ ಪ್ರಕಟವಾಗಿವೆ. ಕೃತಿಗಳು: ಬಳ್ಳಾರಿ ಪಾಳೆಗಾರ ಬಾಲದ ಹನುಮಪ್ಪ ನಾಯಕ, ಕುರುಬರ ಹೆಜ್ಜೆಗಳು, ಜ್ಯೋರ್ತಿವಿಜ್ಞಾನ, ವಿಜಯನಗರ ಸಾಮ್ರಾಜ್ಯ, ...
READ MORE