ವಿಮರ್ಶಕ, ಲೇಖಕರಾದ ಡಾ. ಜಿ. ಬಿ ಹರೀಶ್ ಅವರ ’ದೇವಚಂದ್ರನ ರಾಜಾವಳಿ ಕಥಾಸಾರ ; ಜೈನ ಸಾಹಿತ್ಯ- ಸಾಂಸ್ಕೃತಿಕ – ಐತಿಹಾಸಿಕ ಅಧ್ಯಯನ’ ಇವರ ಸಂಶೋಧನೆಯ ವಿಷಯ. ರಾಜಾವಳಿ ಕಥಾಸಾರವೆಂದರೆ, ಅದು ಸನಾತನ ಧರ್ಮದ ಉಗಮಸ್ಥಾನ, ಮೊದಲ ಜೈನಸಾಹಿತ್ಯ ಚರಿತ್ರೆಯನ್ನು ತಿಳಿಸುವಂತದ್ದು. ಜೀವಂತ ಸಂಸ್ಕೃತಿಯೊಂದಿಗೆ ಮುಖಾಮುಖಿಯಾಗುವ ದೇವಚಂದ್ರನ ನಿಲುವು, ಪ್ರಭುತ್ವಗಳನ್ನು ಪ್ರಸ್ತಾಪಿಸುವಂತದ್ದು.
ದೇವಚಂದ್ರ ಕವಿ ಎಂಥವನು? ದೇವಚಂದ್ರನ ಬರಹಗಳ ಕಾಲ-ದೇಶ, ದೇವಚಂದ್ರನ ಸ್ಫೂರ್ತಿ ಮತ್ತು ರಾಜಾವಳಿ ಕಥಾಸಾರದ ಸ್ವರೂಪ, ರಾಜಾವಳಿಯ ಬೌದ್ಧಿಕ ವಾತಾವರಣ, ರಾಜಾವಳಿಯ ಕಥಾಸಾರದಲ್ಲಿ ಜೈನ ಇತಿಹಾಸ, ರಾಜಾವಳಿಯ ಕಥಾಸಾರದಲ್ಲಿ ಸಂಸ್ಕೃತಿ, ಸಮಾಜ, ಸಮುದಾಯಗಳು, ರಾಜಾವಳಿ ಕಥಾಸಾರದ ಹಿನ್ನೆಲೆ ಮತ್ತು ಮುನ್ನೋಟ ಇಂತಹ ಮಾಹಿತಿಗಳ ದೀರ್ಘ ಇತಿಹಾಸ, ವಸ್ತು ವಿವರಣೆಗಳನ್ನು ’ ವಕ್ರರೇಖೆ’ ಕೃತಿ ಒಳಗೊಂಡಿದೆ.
©2024 Book Brahma Private Limited.