‘ಉತ್ತರಕನ್ನಡ ಜಿಲ್ಲಾ ಗ್ರಂಥಕಾರ ಕೃತಿಕೋಶ’ ಕೃತಿಯು ನಾರಾಯಣ ಶಾನಭಾಗ ಅವರ ಸಂಶೋಧನ ಕೃತಿಯಾಗಿದೆ. ಪ್ರಾರಂಭದಿಂದ 2015ರ ರ ಡಿಸೆಂಬರವರೆಗಿನ ಗ್ರಂಥಕಾರರ ಮಾಹಿತಿ ಇಲ್ಲಿದೆ. ಕೃತಿಯ ಕರ್ತೃ ನಾರಾಯಣ ಶಾನಭಾಗ ಅವರು, ಪ್ರಸಕ್ತ ಕೃತಿಯ 2ನೇ ಅಧ್ಯಾಯದಲ್ಲಿ ಪ್ರಾರಂಭದಿಂದ ಕ್ರಿ.ಶ. 1900ರ ವರೆಗಿನ ಜಿಲ್ಲೆಯ ಎಲ್ಲಾ ಸಮುದಾಯಗಳ ಗ್ರಂಥಕಾರರ ಲಭ್ಯ ವಿವರಗಳನ್ನು ನೀಡಲಾಗಿದೆ. ಅಧ್ಯಾಯ 3 ಮತ್ತು 4ರಲ್ಲಿ ಕ್ರಿ.ಶ. 1900 ರಿಂದ ಡಿಸೆಂಬರ 2015ರ ಅವಧಿಯ ಕೀರ್ತಿಶೇಷ ಹಾಗೂ ವರ್ತಮಾನ ಗ್ರಂಥಕಾರರ ವಿವರಗಳನ್ನು ನೀಡಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಉತ್ತರಕನ್ನಡ ಜಿಲ್ಲಾ ಮತ್ತು ತಾಲೂಕು ಘಟಕಗಳ ಸಂಕ್ಷಿಪ್ತ ಮಾಹಿತಿ, ಜಿಲ್ಲೆಯಲ್ಲಿ ನಡೆದ ತಾಲೂಕಾ, ಜಿಲ್ಲಾ ಮತ್ತು ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳ ಸಂಕ್ಷಿಪ್ತ ಯಾದಿ; ಜಿಲ್ಲೆಯ ಕರ್ನಾಟಕ ಸಂಘಗಳು, ಚುಟುಕು ಸಾಹಿತ್ಯ ಪರಿಷತ್ ಘಟಕಗಳು, ಕೊಂಕಣಿ ಸಾಹಿತ್ಯ ಚಟುವಟಿಕೆಗಳು ಇತ್ಯಾದಿಗಳ ಸಂಕ್ಷಿಪ್ತ ಮಾಹಿತಿಗಳನ್ನು 3, 4, 5, 6 ಮತ್ತು 7ನೇ ಅನುಬಂಧಗಳಲ್ಲಿ ನೀಡಲಾಗಿದೆ. ಇದರಿಂದ ಈವರೆಗೆ ಸಂಗ್ರಹರೂಪದಲ್ಲಿ ಅಲಭ್ಯವಾಗಿದ್ದ ಮಾಹಿತಿಗಳನ್ನು ಒತ್ತಟ್ಟಿಗೆ ತರುವ ಪ್ರಯತ್ನ ಮಾಡಲಾಗಿದೆ. ಇವೆಲ್ಲವೂ ಗ್ರಂಥಕಾರ ಕೃತಿಕೋಶವನ್ನು ಹೆಚ್ಚು ಉಪಯುಕ್ತವನ್ನಾಗಿಸುತ್ತವೆಯೆಂದು ನಂಬಲಾಗಿದೆ ಎನ್ನುತ್ತಾರೆ. ಈ ಕೃತಿಯಲ್ಲಿ 14 ಅಧ್ಯಾಯಗಳಿದ್ದುಅಧ್ಯಾಯ-1; ಪ್ರಸ್ತಾವನೆ, ಅಧ್ಯಾಯ 2 : ಪ್ರಾಚೀನ ಕಾಲ, ಅಧ್ಯಾಯ- 3 ; ಆಧುನಿಕ ಕಾಲ-ಕೀರ್ತಿಶೇಷರು, ಅಧ್ಯಾಯ-4 : ಆಧುನಿಕ ಕಾಲ-ವರ್ತಮಾನರು ಆ. ಪುರುಷರು ಬಿ. ಮಹಿಳೆಯರು, ಅನುಬಂಧ :1, ಆಗಂತುಕ ಗಂಥಕಾರರು, ಅನುಬಂಧ: 2, ಅವಶ್ಯಕ ಮಾಹಿತಿ ಲಭ್ಯವಾಗದ ಗ್ರಂಥಕಾರರ ಕುರಿತ ಲಭ್ಯಮಾಹಿತಿ. ಅನುಬಂಧ:3, ಕನ್ನಡ ಸಾಹಿತ್ಯ ಪರಿಷತ್ತಿನ ಉತ್ತರಕನ್ನಡ ಜಿಲ್ಲಾ ಘಟಕ ಮತ್ತು ತಾಲೂಕಾ ಘಟಕಗಳು, ಅನುಬಂಧ :4, ಉತ್ತರಕನ್ನಡ ಜಿಲ್ಲೆಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಗಳು, ಅನುಬಂಧ:5, ಉತ್ತರಕನ್ನಡ ಜಿಲ್ಲೆಯ ಕರ್ನಾಟಕ ಸಂಘಗಳು, ಅನುಬಂಧ 6 : ಕರ್ನಾಟಕ ರಾಜ್ಯ ಚುಟುಕು ಪರಿಷತ್ತಿನ ಉತ್ತರ ಕನ್ನಡ ಜಿಲ್ಲಾ ಘಟಕದ ಸಂಕ್ಷಿಪ್ತ ಮಾಹಿತಿ, ಅನುಬಂಧ 7 : ಉತ್ತರ ಕನ್ನಡದಲ್ಲಿ ಕೊಂಕಣಿ ಸಾಹಿತ್ಯ ಚಟುವಟಿಕೆಗಳು, ಅನುಬಂಧ 8 : ಜಿಲ್ಲೆಯ ಸಾಹಿತಿ-ಸಾಹಿತ್ಯ ಕುರಿತ ವಿಶೇಷ ಅಧ್ಯಯನಗಳು, ಅನುಬಂಧ 9 : ಕೆಲವು ಮಾಹಿತಿಗಳು, ಅನುಬಂಧ 10: ಚಿತ್ರಸಂಪದ ಇವೆಲ್ಲವುಗಳನ್ನು ಒಳಗೊಂಡಿದೆ.
©2024 Book Brahma Private Limited.