ತಾಳಕೇರಿ ಬಸವರಾಜ ರವರು ಕವಿ, ನಾಟಕಕಾರ, ಸಂಗೀತ ನಿರ್ದೇಶಕ, ರಂಗಭೂಮಿ ಹೀಗೆ ಬಹುಮುಖ ಪ್ರತಿಭೆಯ ಮೂಲಕ ಖ್ಯಾತರಾದವರು. ಹೈದ್ರಾಬಾದ್ ಕರ್ನಾಟಕದಲ್ಲಿ ಮನೆಮಾತಾಗಿದ್ದ ಇವರು ಕನ್ನಡ ನಾಡು ನುಡಿಗಾಗಿ ಅವಿರತ ಶ್ರಮ ಪಟ್ಟವರು. ಕೇವಲ ಎರಡನೇ ತರಗತಿವರೆಗೆ ಮಾತ್ರ ಔಪಚಾರಿಕ ಶಿಕ್ಷಣ ಪಡೆದರೂ ಕನ್ನಡ ಸಾಹಿತ್ಯ ಜಗತ್ತಿಗೆ 40ಕ್ಕೂ ಹೆಚ್ಚು ಕೃತಿಗಳನ್ನು ನೀಡಿದ ಅಸಾಧರಣ ಪ್ರತಿಭೆ. ಹೊಸ ಪೀಳಿಗೆಗೆ ಆದರ್ಶನೀಯರೂ, ಮಾದರಿ ವ್ಯಕ್ತಿಯಾದ ಇವರ ಸ್ಫೂರ್ತಿದಾಯಕ ಬದುಕನ್ನು, ಜೀವನ ಸಾಧನೆಯನ್ನು ಮುಂದಿನ ತಲೆಮಾರಿಗೆ ದಾಟಿಸುವ ಕೆಲಸವನ್ನು ದಸ್ತಗೀರಸಾಬ್ ದಿನ್ನಿಯವರು ಈ ಕೃತಿಯಲ್ಲಿ ಮಾಡಿದ್ದಾರೆ.
ರಾಯಚೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಕವಿ-ಲೇಖಕ ದಸ್ತಗೀರ್‌ಸಾಬ ದಿನ್ನಿ, ತಾಳಕೇರಿ ಬಸವರಾಜ, ಬಿಸಿಲ ಹೂ, ಎಲ್ಲಾ ಕಾಲದ ಬೆಳಕು, ಆದಯ್ಯ, ಹೊಸಗನ್ನಡ ಕಥಾಸಂಗ್ರಹ, ಹಗೇವು, ದಿನ್ನಿ ತಾಳಪಲ್ಲಿ ವೆಂಕಯ್ಯ, ಸಾಹಿತ್ಯ ಸಲ್ಲಾಪ, ಜಾಗತೀಕರಣ ಮತ್ತು ಸಂಸ್ಕೃತಿ ಅವರ ಪ್ರಕಟಿತ ಕೃತಿಗಳು. ರಾಯಚೂರು ತಾಲೂಕಿನ ದಿನ್ನಿ ಗ್ರಾಮದಲ್ಲಿ ಜನನ.ಕವನ , ಗಜಲ್ , ಲೇಖನ, ವಿಮರ್ಶೆ ಬರೆದಿದ್ದಾರೆ. ...
READ MORE