ತ.ರಾ.ಸು.

Author : ನಾ. ಪ್ರಭಾಕರ್

Pages 112

₹ 60.00




Year of Publication: 2011
Published by: ನವಕರ್ನಾಟಕ ಪ್ರಕಾಶನ
Address: 101, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಕುಮಾರ ಪಾರ್ಕ್ ಪೂರ್ವ, ಬೆಂಗಳೂರು-560001
Phone: 7353530805 / 080 - 20161913

Synopsys

ತ.ರಾ.ಸು. (ತ.ರಾ.ಸುಬ್ಬರಾಯ) ಅವರು ಪ್ರಗತಿಶೀಲ ಪಂಥದ ಲೇಖಕರ ಪರಂಪರೆಯಲ್ಲಿ ಅ.ನ.ಕೃ. ಅವರ ಪ್ರಭಾವ ವಲಯದಲ್ಲಿ ರೂಪುಗೊಂಡ ಕನ್ನಡದ ಮಹತ್ವದ ಲೇಖಕರು. ಅವರ ಭಾಷಾ ಶೈಲಿಗಳ ಸಲೀಲತೆ, ಉಜ್ವಲತೆ, ಉತ್ಸಾಹ, ಭಾವ ನಿರ್ಭರತೆಗಳಿಗೆ ಮಾರುಹೋಗದ ಓದುಗರಿಲ್ಲ. ಸಾಮಾಜಿಕ ಕಾದಂಬರಿಗಳ ರಚನೆಯಲ್ಲಿ ಸಾಕಷ್ಟು ಯಶಸ್ಸುಗಳಿಸಿದ್ದರೂ, ಐತಿಹಾಸಿಕ ಕಾದಂಬರಿಕಾರರಾಗಿ ಅವರು ಗಳಿಸಿದ ಯಶಸ್ಸು ಮತ್ತು ಜನಪ್ರಿಯತೆ ಅಸಾಧಾರಣವಾದುದು. ಕನ್ನಡಿಗರ ಹೃದಯದಲ್ಲಿ ಅವರು ಶಾಶ್ವತವಾದ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಅವರ ’ದುರ್ಗಾಸ್ತಮಾನ’ ಕೃತಿಗೆ 1985 ರಲ್ಲಿ (ಮರಣೋತ್ತರವಾಗಿ) ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ.

ತ.ರಾ.ಸು. ಅವರ ಬದುಕು ಮತ್ತು ಬರಹವನ್ನು ಪರಿಚಯಿಸುವ ಕೃತಿಯ ಲೇಖಕರು ನಾ. ಪ್ರಭಾಕರ್. 

About the Author

ನಾ. ಪ್ರಭಾಕರ್

ಸ್ವತಃ ಲೇಖಕ-ವಿಮರ್ಶಕರಾಗಿರುವ ನಾ. ಪ್ರಭಾಕರ್‌ ಅವರು ತ.ರಾ.ಸು. ಅವರ ಹೆಸರಿನೊಂದಿಗೆ ತಳುಕು ಹಾಕಿಕೊಂಡಿರುವ ಹೆಸರು. ಸುಮಾರು ಒಂದುವರೆ ದಶಕಗಳ ಕಾಲ ತ.ರಾ.ಸು. ಅವರ ಒಡನಾಡಿಯಾಗಿದ್ದವ ನಾ. ಪ್ರಭಾಕರ್‌. ತ.ರಾ.ಸು. ಅವರ ವ್ಯಕ್ತಿತ್ವದ ಒಳ-ಹೊರಗುಗಳನ್ನು ಬಲ್ಲವರು. ...

READ MORE

Related Books