ಕಲಬುರಗಿಯ ಅನನ್ಯ ಹಾಗೂ ಅಜ್ಞಾತ ಕಲಾವಿದ ಟಿ. ನಾಗಭೂಷಣ ಕುರಿತ ಈ ಪುಸ್ತಿಕೆಯು ಬಾಗೋಡಿಯವರ ಆಸಕ್ತಿ ಹಾಗೂ ಪ್ರೀತಿಗೆ ಕನ್ನಡಿ ಹಿಡಿದಂತಿದೆ. ಭಾವನಾತ್ಮಕ ಹಾಗೂ ಸೃಜನಶೀಲ ಮನಸ್ಸಿನ ನಾಗಭೂಷಣ ಅವರು ಮುಂಬೈನ ಪ್ರತಿಷ್ಠಿತ ಜೆ.ಜೆ. ಕಲಾಶಾಲೆಯ ವಿದ್ಯಾರ್ಥಿ ಆಗಿದ್ದವರು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಅದರ ಕಥೆಯೇ ಬೇರೆ ಆಗಿರುತ್ತಿತ್ತು. ದುರದೃಷ್ಟವಶಾತ್ ಹಾಗೆ ಆಗಲಿಲ್ಲ. ಆದರೆ, ಅದು ಮತ್ತೊಂದು ವಿಭಿನ್ನ ಕಲಾಸೃಷ್ಟಿಗೆ ಅನುವು ಮಾಡಿಕೊಟ್ಟಿತು. ಇವರ ಕೆಲ ಧರ್ಮಾಧಾರಿತ ಚಿತ್ರಗಳು ಕರ್ನಾಟಕ ದೃಶ್ಯ ಸಂಸ್ಕೃತಿಗೆ ನೀಡಿದ ವಿಭಿನ್ನ ಮತ್ತು ಅಪರೂಪದ ಕೊಡುಗೆ. ವಸ್ತುವಿನ ಆಯ್ಕೆ, ಅದನ್ನು ಮಂಡಿಸುವ ಕ್ರಮದಲ್ಲಿಯೂ ನಾಗಭೂಷಣ ಭಿನ್ನರಾಗಿ ನಿಲ್ಲುತ್ತಾರೆ. ಬಹುತ್ವ ಪ್ರಿಯರೂ ಮತ್ತು ಅದರ ಪ್ರತಿಪಾದಕರೂ ಆಗಿದ್ದ ನಾಗಭೂಷಣ ಅವರು ಕಲಾಲೋಕವು ಮರೆತಿರುವ ಹಾಗೂ ಮರೆಯಬಾರದ ಕಲಾವಿದ.
ಕಲಬುರಗಿ ಜಿಲ್ಲೆಯ ಚಿತ್ತಾಪುರದವರಾದ ಡಾ. ಮಲ್ಲಿಕಾರ್ಜುನ ಬಾಗೋಡಿ ಅವರು ದೃಶ್ಯಕಲಾ ಸಾಹಿತ್ಯದ ಪ್ರಮುಖ ಲೇಖಕರು. ಸ್ವತಃ ಕಲಾವಿದರಾಗಿರುವ ಮಲ್ಲಿಕಾರ್ಜುನ ಅವರು ಸದ್ಯ ಗುಲ್ಬರ್ಗ ವಿಶ್ವವಿದ್ಯಾಲಯದ ದೃಶ್ಯಕಲಾ ವಿಭಾಗದಲ್ಲಿ ಅಧ್ಯಾಪಕರಾಗಿದ್ದಾರೆ. ಸುರಪುರದ ಚಿತ್ರಕಲೆ ಕುರಿತು ಮಂಡಿಸಿದ ಪ್ರಬಂಧಕ್ಕೆ ಪಿಎಚ್.ಡಿ. ಪದವಿ ದೊರೆತಿದೆ. ...
READ MORE