ಕುವೆಂಪು ಅವರು ’ಸ್ವಾಮಿ ವಿವೇಕಾನಂದ’ ಅವರನ್ನು ಕುರಿತು ರಚಿಸಿದ ಜೀವನ ಚರಿತ್ರೆಯಿದು. ಈ ಗ್ರಂಥದಲ್ಲಿ ಒಟ್ಟು 17 ಅಧ್ಯಾಯಗಳಿವೆ.
ಯಾರಿವನು ? ಜನನ ಮತ್ತು ಬಾಲ್ಯ, ಹಿನ್ನೆಲೆ, ನಿರಂಕುಶಮತಿ, “ಮುಕ್ತಿ ರಾಹು”, ಅಗ್ನಿಪರೀಕ್ಷೆ, ಅನುಭೂತಿ, ಧರ್ಮನೀಡವಿರಚನೆ, ಪರಿವ್ರಾಜಕ ಸನ್ಯಾಸಿ, ಕಡಲಿನಾಚೆಗೆ, ಹಸುಳೆಯ ಗೆಲುವಿಗೆ ಹೆತ್ತಮ್ಮನ ಹೆಮ್ಮೆ, ಸಹಸ್ರ ದ್ವೀಪೋದ್ಯಾನದಲ್ಲಿ, ಯೂರೋಪಿನಲ್ಲಿ ಯುಗ ಪ್ರವರ್ತಕ ಸಂಘಸ್ಥಾಪನೆ, ಜೀವನಸಂಧ್ಯೆ, ಕರೆಯುತಿದೆ ಯುಗವಾಣಿ ಎಂಬ ಅಧ್ಯಾಯಗಳಿವೆ. ಈ ಗ್ರಂಥಕ್ಕೆ ಡಿ. ವಿ. ಗುಂಡಪ್ಪನವರ ಮುನ್ನುಡಿ ಇದೆ. ಮೈಸೂರಿನ ಶ್ರೀರಾಮಕೃಷ್ಣ ಆಶ್ರಮವು 1932ರಲ್ಲಿ ಈ ಪುಸ್ತಕ ಪ್ರಕಟಿಸಿತ್ತು. ಮೈಸೂರು
ಕುವೆಂಪು ಎಂಬ ಕಾವ್ಯನಾಮದಿಂದ ಸಾಹಿತ್ಯ ರಚನೆ ಮಾಡಿದ ಕವಿ, ಪ್ರಖರ ವಿಚಾರವಾದಿ-ಚಿಂತಕ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರು ಕನ್ನಡ ಸಾಹಿತ್ಯದ ಮೇರೆಗಳನ್ನು ವಿಸ್ತರಿಸಿದವರು. ತಂದೆ ವೆಂಕಟಪ್ಪಗೌಡ ತಾಯಿ ಸೀತಮ್ಮ. ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯವರಾದ ಪುಟ್ಟಪ್ಪ ಜನಿಸಿದ್ದು ಚಿಕ್ಕಮಗಳೂರು ಜಿಲ್ಲೆಯ ಹಿರೇಕೂಡಿಗೆಯಲ್ಲಿ 1904ರ ಡಿಸೆಂಬರ್ 29ರಂದು. ಮನೆಯಲ್ಲೇ ಖಾಸಗಿ ಮೇಷ್ಟರ ಮೂಲಕ ಪ್ರಾರಂಭಿಕ ವಿದ್ಯಾಭ್ಯಾಸದ ನಂತರ ತೀರ್ಥಹಳ್ಳಿಯಲ್ಲಿ ವಿದ್ಯಾಭ್ಯಾಸ ಮುಗಿಸಿ ಮೈಸೂರಿನಲ್ಲಿ ವೆಸ್ಲಿಯನ್ ಮಿಷನ್ ಹೈಸ್ಕೂಲ್, ಮಹಾರಾಜ ಕಾಲೇಜುಗಳಲ್ಲಿ ಓದಿ ಎಂ.ಎ. ಪದವಿ (1929) ಪಡೆದರು. ಮೈಸೂರು ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕ (1929) ಆಗಿ ಅನಂತರ ಕ್ರಮೇಣ ಉಪಪ್ರಾಧ್ಯಾಪಕ, ...
READ MORE