ಕನ್ನಡ ನಾಡು ಕಂಡ ಅಪರೂಪದ ಗಾಂಧಿವಾದಿ ಹಾಗೂ ಸರ್ವೋದಯ ಆಂದೋಲನದ ಧುರೀಣ ಸುರೇಂದ್ರ ಕೌಲಗಿ. ಅವರ ಬದುಕಿನ ಕುರಿತು ಚಿಂತಕ, ಸಾಹಿತಿ ಕೆ.ಪಿ.ಸುರೇಶ ಅವರು ಉದಯಬಾನು ಕಲಾಸಂಘದ ಸುವರ್ಣ ಪುಸ್ತಕ ಮಾಲೆಗಾಗಿ ಕೃತಿ ರಚಿಸಿದ್ದಾರೆ.
ಮೂಲತಃ ಧಾರವಾಡ ಜಿಲ್ಲೆಯವರಾದ ಇವರು ಮಂಡ್ಯದಲ್ಲಿ ಜನಪದ ಸೇವಾ ಟ್ರಸ್ಟ್ ಸ್ಥಾಪಿಸಿ ಸಮಾಜ ಸೇವೆಯಲ್ಲಿ ನಿರತರಾದವರು. 2013 ರಲ್ಲಿ ದಾಸಿಮಯ್ಯ ಪ್ರಶಸ್ತಿ, 2014ರಲ್ಲಿ ರಾಷ್ಟ್ರಮಟ್ಟದ ಜಮ್ನಾಲಾಲ್ ಬಜಾಜ್ ಪ್ರಶಸ್ತಿ ಕೂಡ ಲಭಿಸಿದೆ.
ಕೆ.ಪಿ. ಸುರೇಶ್ ಅವರು ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಸುಸ್ಥಿರ/ಸಾವಯವ ಕೃಷಿ, ಗಾಂಧೀ ವಿಚಾರಗಳು, ಸಾಹಿತ್ಯ- ವಿಭಿನ್ನ ವಿಷಯಗಳಲ್ಲಿ ಆಸಕ್ತಿಯನ್ನು ಹೊಂದಿರುವ ಇವರು ಈಗಾಗಲೇ ಎರಡು ಕವನ ಸಂಕಲನ, ಎರಡು ಅನುವಾದಿತ ಕೃತಿಗಳನ್ನು ರಚಿಸಿದ್ದಾರೆ. ಕೃಷಿ ಮತ್ತು ಗ್ರಾಮೀಣ ಆರ್ಥಿಕತೆ ಅಭಿವೃದ್ಧಿ, ಇವುಗಳ ಬಗ್ಗೆ ಸತತ ಚಿಂತನೆ ನಡೆಸುವ ಇವರು ತೆರೆಯ ಹಿಂದೆಯೇ 'ಅನಾಮಿಕ'ರಾಗಿ ಇರಲು ಬಯಸುವವರು. ಇವರ ಸಾಹಿತ್ಯ ಕೈಂಕರ್ಯ, ಸಾಹಿತ್ಯಾಸಕ್ತರ ಮೆಚ್ಚುಗೆಗೆ ಪಾತ್ರವಾಗಿದೆ. ...
READ MORE