ಸೋಲೊಪ್ಪಲಾರೆ

Author : ಸಿ.ವಿ.ಶೇಷಾದ್ರಿ ಹೊಳವನಹಳ್ಳಿ

Pages 412

₹ 399.00




Year of Publication: 2017
Published by: ಪ್ರಿಸಮ್ ಬುಕ್ ಪೈ ಲಿ
Address: ಪ್ರಿಸಮ್ ಬುಕ್ ಪೈ ಲಿ, ಬೆಂಗಳೂರು

Synopsys

ಅಜಾತಶತ್ರು ಎಂದು ಪ್ರಸಿದ್ದಿ ಪಡೆದವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ.ಸೋಲರಿಯದ ನೇತಾರ .ಕೋಮುವಾದ ಮತ್ತು ಜಾತ್ಯತೀತ ಚರ್ಚೆಗಳು ತೀವ್ರಗೊಂಡಿರುವ ಈ ಕಾಲಘಟ್ಟದಲ್ಲಿ ಅವರ ಜೀವನಚರಿತ್ರೆ ಕನ್ನಡಕ್ಕೆ ಬಂದಿದೆ. ವಾಜಪೇಯಿ ಒಡನಾಡಿ ವಿಜಯ್ ತ್ರಿವೇದಿ ಹಿಂದಿಯಲ್ಲಿ ಬರೆದಿರುವ 'ಹಾರ್ ನಹೀಂ ಮಾನೂಂಗಾ' ಕೃತಿಯನ್ನು 'ಸೋಲೊಪ್ಪಲಾರೆ' ಹೆಸರಿನಲ್ಲಿ ಕವಿ ಸಿ.ವಿ.ಶೇಷಾದ್ರಿ ಹೊಳವನಹಳ್ಳಿ ಅವರು ಕನ್ನಡಕ್ಕೆ ಸೊಗಸಾಗಿ ಅನುವಾದಿಸಿದ್ದಾರೆ. ಅರ್ಧ ರಾಜಕಾರಣಿ, ಅರ್ಧ ಕವಿಯಾಗಿದ್ದರು.ವಾಜಪೇಯಿ ಕವಿಹೃದಯದೊಂದಿಗೆ ಸುದ್ದಿಯಾಚೆಗಿನ ಮಗ್ಗಲುಗಳನ್ನೂ ಪರಿಚಯಿಸಿದ್ದಾರೆ.

About the Author

ಸಿ.ವಿ.ಶೇಷಾದ್ರಿ ಹೊಳವನಹಳ್ಳಿ

ಕವಿ, ಲೇಖಕ, ಅನುವಾದಕ ಸಿ.ವಿ.ಶೇಷಾದ್ರಿ ಹೊಳವನಹಳ್ಳಿ ಅವರ ಕವಿತೆಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇವರ `ಎಲ್ಲರೂ ಕೈಯೆತ್ತಿ ನಿಂತಿದ್ದಾರೆ ' ಕವಿತೆ ಪ್ರಜಾವಾಣಿ ದೀಪಾವಳಿ ವಿಶೇಷಾಂಕದಲ್ಲಿ ಮೆಚ್ಚುಗೆಯ ಕವಿತೆಯಾಗಿ ಪ್ರಕಟಗೊಂಡಿದೆ. ರೆಕ್ಕೆ ಗೂಡು ಆಕಾಶ, ಗುರುತು, ಸೋಲೊಪ್ಪಲಾರೆ, ಚರ್ಚೆಗೊಳಗಾಗುತ್ತಾನೆ ಸೂರ್ಯ -ಇವರ ಪ್ರಮುಖ ಕೃತಿಗಳು. ಪ್ರಶಸ್ತಿಗಳು: ಕರ್ನಾಟಕ ಸಾಹಿತ್ಯ ಅಕಾಡೆಮಿಯ 2021ನೇ ಸಾಲಿನ ಪುಸ್ತಕ ಬಹುಮಾನ ...

READ MORE

Related Books