ಹುಬ್ಬಳ್ಳಿಯಲ್ಲಿ ಜನಿಸಿದ ಸಿದ್ದಪ್ಪ ಕಂಬಳಿ ರವರು ಮುಂಬಯಿ ಸರ್ಕಾರದ ಅವಧಿಯಲ್ಲಿ ಮಂತ್ರಿಯಾಗಿ ಉತ್ತಮ ಆಡಳಿತ ನೀಡಿದ ನಾಯಕರು. ತಾವು ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಇವರು ಕರ್ನಾಟಕ ಸಂಸ್ಕೃತಿಯನ್ನು ಮತ್ತು ನಾಡುನುಡಿಯನ್ನು ಉತ್ತಮಗೊಳಿಸಿದವರು. ನಾಯಕರು ಆಗಿ ಮಾತ್ರವಲ್ಲದೇ ಹೋರಾಟದ ಮೂಲಕವೂ ಕನ್ನಡಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದವರು. ವೃತ್ತಿಯಲ್ಲಿ ವಕೀಲರಾದರೂ ತಮ್ಮ ಪ್ರವೃತ್ತಿಗಳಾದ ಸ್ವಾತಂತ್ರ್ಯ ಹೋರಾಟ, ಕರ್ನಾಟಕದ ಏಕೀಕರಣಕ್ಕೆ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡ ಕನ್ನಡದ ಪ್ರಮುಖ ಕಟ್ಟಾಳು ಆಗಿ ಗುರುತಿಸಿಕೊಂಡವರು. ಇವರ ಬದುಕನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾಯಕವನ್ನು ಪ್ರೊ. ಸಿ.ವಿ ಕೆರಿಮನಿಯವರು ಈ ಕೃತಿಯ ಮೂಲಕ ಮಾಡಿದ್ದಾರೆ.