`ಸರ್ ಮಿರ್ಜಾ ಇಸ್ಮಾಯಿಲ್ ಅವರ ಜೀವನ ಚರಿತ್ರೆ’ ವಿ.ಎಸ್. ನಾರಾಯಣರಾವ್ ಅವರ ಕೃತಿಯಾಗಿದೆ. ಸರ್ ಮಿರ್ಜಾ ಇಸ್ಮಾಯಿಲ್ ಮಾದರಿ ಮೈಸೂರನ್ನು ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಮಹನೀಯರು. ಹದಿನೈದು ವರ್ಷಗಳ ಕಾಲ ಮೈಸೂರು ಸಂಸ್ಥಾನದ ದಿವಾನರಾಗಿ ಮಹತ್ವದ ಕೊಡುಗೆಯನ್ನು ನೀಡಿದವರು. ಕನ್ನಡ ಸಾಹಿತ್ಯ ಪರಿಷತ್ತಿನ ಬೆಳವಣಿಗೆಯಲ್ಲಿ ಕೂಡ ಅವರ ಪಾತ್ರ ಪ್ರಮುಖವಾದದ್ದು. ಅವರ ಕುರಿತು ವಿ.ಎಸ್. ನಾರಾಯಣರಾವ್ ಬರೆದಿರುವ ಈ ಕೃತಿಯು ಹಲವು ಮಹತ್ವದ ಒಳನೋಟಗಳನ್ನು ಒಳಗೊಂಡಿದೆ. ಶಿಕ್ಷಣ ತಜ್ಞರಾಗಿ, ಕೈಗಾರಿಕಾ ಕ್ರಾಂತಿಯ ಹರಿಕಾರರಾಗಿ, ಶ್ರೇಷ್ಠ ಇಂಜಿನಿಯರ್ ಆಗಿ ದೇಶಕ್ಕೆ ಮಹತ್ತರ ಕೊಡುಗೆಯನ್ನು ನೀಡಿದ್ದಾರೆ. ಒಟ್ಟಾರೆಯಾಗಿ ಈ ಕೃತಿಯು ಕರ್ಮಯೋಗಿಯ ಕತೆಯನ್ನು ಹೇಳುತ್ತದೆ.
ವಿ.ಎಸ್. ನಾರಾಯಣರಾವ್ ಅವರು ಸಾಹಿತ್ಯ ಕ್ಷೇತ್ರಕ್ಕೆ ಗಣನೀಯವಾದ ಕೊಡುಗೆಯನ್ನು ನೀಡಿದ್ದಾರೆ. ವಿಶ್ವೇಶ್ವರಯ್ಯ ಕುರಿತಾದ ವಿಚಾರಗಳನ್ನು ಸಂಗ್ರಹಿಸಿ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಜೀವನ ಚರಿತ್ರೆ- ಸಾಧನೆ ಹಾಗೂ ಸರ್ ಮಿರ್ಜಾ ಇಸ್ಮಾಯಿಲ್ ಅವರ ಜೀವನ ಚರಿತ್ರೆ ಕುರಿತು ಕೃತಿಗಳನ್ನು ರಚಿಸಿದ್ದಾರೆ. ...
READ MORE