ವ್ಯಾಸಮೂರ್ತಿ ದೇಶಪಾಂಡೆ ಅವರನ್ನು ಕುರಿತಾದ ಒಂದು ವಿವರಪೂರ್ಣವಾದ, ಅಧ್ಯಯನಶೀಲವಾದ ಆತ್ಮೀಯ ಪರಿಚಯ ಇದಾಗಿದೆ. ದೇಶಪಾಂಡೆ ಅಥವಾ ಈ ಪುಸ್ತಕದಲ್ಲಿ ಸಾಧ್ಯಂತವಾಗಿ 'ವ್ಯಾಸಮೂರ್ತಿ' ಎಂದೇ ಕರೆಯಲಾಗಿರುವ ಈ ಶಿಲ್ಪಿಯದ್ದು ಬಹುಮುಖಿ, ಬಹುಶ್ರುತ ವ್ಯಕ್ತಿತ್ವ, ದೃಶ್ಯಕಲೆಯಲ್ಲಿ ಬಹುಶ್ರುತ್ವ ಎಂದರೆ ಒಂದು ಗಾಢ ಕಲಾತ್ಮಕ ಬದುಕಿನ ಅನುಭವವನ್ನು ಹತ್ತು ಹಲವು ಜಾಗ, ಮಾಧ್ಯಮ, ಶೈಲಿ, ಆಯಾಮ ಹಾಗೂ ಕಾಲಘಟ್ಟಗಳಲ್ಲಿ ತೊಡಗಿಸಿಕೊಂಡು ಮಾಗಿದವರು ಎಂದರ್ಥವೇ ಹೊರತು ಪ್ರಖ್ಯಾತರು ಎಂದೇನಲ್ಲ, ವ್ಯಾಸಮೂರ್ತಿಯವರಿಗೆ ಹಲವು ಪ್ರಶಸ್ತಿ ಮನ್ನಣೆಗಳು ದೊರಕಿದ್ದರೂ, ಏಮರ್ಶಾ ವ್ಯಾಖ್ಯಾನಗಳು ಅವರ ಕೃತಿ ಸಾಧನೆಯನ್ನು ಇನ್ನೂ ಸ್ಪರ್ಶಿಸಬೇಕಿದೆ. ಡಾ. ಆರ್.ಎಚ್.ಕುಲಕರ್ಣಿಯವರ ಈ ಪುಸ್ತಕ ಆ ಕೆಲಸವನ್ನು ಮಾಡುವ ಸೇತುವಾಗಿದೆ, ಡಾ.ಆರ್.ಎಚ್.ಕುಲಕರ್ಣಿಯವರ ಈ ಸಾಂದ್ರ ಬರವಣಿಗೆಯಲ್ಲಿ ವ್ಯಾಸಮೂರ್ತಿ ದೇಶಪಾಂಡೆಯವರನ್ನು ಪರಿಚಯಿಸುವ ಪರಿ ಭಿನ್ನವಾಗಿದೆ, ಬದಾಮಿಯ ಐತಿಹಾಸಿಕ ಶಿಲ್ಪ ಸಂಪ್ರದಾಯ, ಅದಲಂದಾಗಿ ತಮ್ಮ ಬಾಲ್ಯಾವಸ್ಥೆಯಲ್ಲಿಯೇ ಅನೌಪಚಾರಿಕ ಕಲಾ ಮಾರ್ಗದರ್ಶಿಯಾಗಿ ಅವರು ಕಲೆಗೆ ಆಕರ್ಷಿತರಾಗಿದ್ದಲಂದ ಆರಂಭಿಸಿ, ಧಾರವಾಡ, ಬರೋಡ, ಹಾಸನ, ಮೈಸೂರು ಕಾವಾ, ಇಲವಾಲದ ಸ್ಟುಡಿಯೋ, ಕಲಾತ್ಮಕ ಸಂಸಾರದ ನಿರ್ಮಿತಿಯವರೆಗೂ ಈ ಲೇಖಕರು ಏವಲಸುವ ಕಥನದ ರೀತಿ ಆಪ್ತವೂ ಅಪ್ಯಾಯಮಾನವೂ ಆಗಿದೆ. ವಿಶ್ಲೇಣಾತ್ಮಕವಾದರೂ, ಕಲಾ ವಿಮರ್ಶೆಯ ಅವಸರದ ತೀರ್ಮಾನಗಳಿಲ್ಲದ ತೆರೆದ ಪಠ್ಯವಿದಾಗಿದೆ. ಕಲೆಯ ಆಧುನಿಕಪೂರ್ವ ಹಾಗೂ ಆಧುನಿಕಕ್ಕೂ ನಡುವೆ ಇರುವ ಕಲಾ ಬರವಣಿಗೆಯ ಸಂಪ್ರದಾಯಗಳ ನಡುವೆ ಇರುವ ಪ್ರತ್ಯೇಕತೆಯನ್ನು ಮುರಿದು, ಹೊಸದೊಂದು ಬೆಸುಗೆಯನ್ನು ಕಟ್ಟಿಕೊಟ್ಟಿರುವುದು ಈ ಬರವಣಿಗೆಯ ಅತಿಮುಖ್ಯ ಸಾಧನೆ, ಕರ್ನಾಟಕದ ಕಲಾವಿದರ ಕುರಿತಾದ ಬರವಣಿಗೆಯ ಸಂಪ್ರದಾಯಕ್ಕೆ ಇದೊಂದು ಅಪೂರ್ವ ಮಾದರಿ ಸಹ, ಸಾಬಾಲ್ಟಾರ್ನ್ ಅಥವಾ ಪರ್ಯಾಯ ಸಂಪ್ರದಾಯಕ್ಕೊಂದು ಮಾದರಿ ಇದಾಗಿದೆ. ಎಂದು ಪುಸ್ತಕದ ಹಿನ್ನುಡಿಯಲ್ಲಿ ತಿಳಿಸಲಾಗಿದೆ.
©2024 Book Brahma Private Limited.