ಚಿಕ್ಕಂದಿನಿಂದ ಗೋವಾದಲ್ಲಿ ನೆಲೆಸಿ ಅಲ್ಲಿ ಕನ್ನಡ ಜಾಗೃತಿ ಮೂಡಿಸಿದವರು ಶಾ.ಮಂ. ಕೃಷ್ಣರಾವ್. ಭಾಷಾ ಬಾಂಧವ್ಯಕ್ಕೆ ಸೇತುವಾಗಿರುವ ಅವರು ಗಡಿನಾಡ ಸಮಸ್ಯೆ ಪರಿಹರಿಸಲು ಪರಿಶ್ರಮಿಸಿದವರು. ಕನ್ನಡ- ಸಂಸ್ಥೆಗಳನ್ನು ಗೋವಾದಲ್ಲಿ ಹುಟ್ಟುಹಾಕುವ ಮೂಲಕ ಸಂಘಟಕರಾಗಿ ಕೆಲಸ ಮಾಡಿದ ಅವರು ಸಾಹಿತಿಯಾಗಿ ಕನ್ನಡ ಸೇವೆಗೈದವರು. ಅವರ ಪರಿಚಯ ನೀಡುವ ಕೃತಿ.
ವರದಾ ಶ್ರೀನಿವಾಸ್, ಎಂ.ಎ., ಪಿಎಚ್.ಡಿ., ಹಿಂದಿ(ಪ್ರವೀಣ) ಸಂಸ್ಕೃತ ವಿಶಾರದ ಭಾಷಾಂತರಕಾರರು. ಕರ್ನಾಟಕ ಕಾನೂನು ಮಂಡಲಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಜನಿಸಿದ್ದು 28-07-1950, ಕಾಸರಗೋಡಿನಲ್ಲಿ. ತಂದೆ ವಿ.ಕೆ. ನಾರಾಯಣ, ತಾಯಿ -ಕೆ. ಸುಂದರಿ. ಕೃತಿಗಳು : ಸಮ್ಮೇಲ (ವಿಮರ್ಶೆ) 1982, ಸಂಕಿರಣ (ಲೇಖನಗಳು) 1990, ಮಹಿಳೆ - ವೈಚಾರಿಕತೆ ಮತ್ತು ವಿಮರ್ಶೆ 1991, ಮಕ್ಕಳ ಸಾಹಿತ್ಯಕ್ಕೆ ಡಾ ಶಿವರಾಮ ಕಾರಂತರ ಕೊಡುಗೆ - 1994, ಸ್ಮರಣೆ ಸೊಗಸು - 2000. ಕವನ ಸಂಕಲನ : ಮುಂಜಾವದ ಕನಸುಗಳು 1993, ಕನಸು ಮತ್ತು ವಾಸ್ತವಗಳ ನಡುವೆ 1998 ಮಕ್ಕಳ ಸಾಹಿತ್ಯ ...
READ MORE