ಪೇಜಾವರ ಹಿರಿಯ ಶ್ರೀಗಳಾದ ವಿಶ್ವತೀರ್ಥರ ಬದುಕು, ಸಾಧನೆಯನ್ನು ವಿವರಿಸುವಂತಹ ದಿನನಿತ್ಯದ ಕುತೂಹಲಕಾರಿ ವಿಷಯಗಳನ್ನು ಛಾಯಾಚಿತ್ರ ಕಲಾವಿದರಾದ ಆಸ್ಟ್ರೋ ಮೋಹನ್ ಅವರು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ಈ ಕೃತಿಯಲ್ಲಿ ಛಾಯಾಚಿತ್ರಗಳು ಮಾತ್ರವಲ್ಲದೇ ಪ್ರತಿ ಚಿತ್ರಕ್ಕೂಅಕ್ಷರರೂಪವನ್ನು ಕೊಡಲಾಗಿದೆ. ಸುಮಾರು ಹನ್ನೆರಡು ವರ್ಷಗಳ ದೀರ್ಘಕಾಲದ ವಿವಿಧ ಕಾಲಗಟ್ಟದ ಚಿತ್ರಗಳು ಈ ಕೃತಿಯಲ್ಲಿವೆ. ಹನ್ನೆರಡು ವರ್ಷಗಳಷ್ಟು ದೀರ್ಘ ಕಾಲದಲ್ಲಿ ನಮಗೆ ಅರಿವಿಲ್ಲದೆ ಬದುಕಿನ ರೀತಿನೀತಿ ರೂಪಗಳು ಬದಲಾಗುತ್ತವೆ, ಚಿ೦ತನೆಗಳು ಬದಲಾಗುತ್ತದೆ. ಆದರೆ ಇಲ್ಲಿ ಹದಿನಾರು ವರ್ಷಗಳ ಹಿಂದಿನ ಶ್ರೀಪಾದರು ಮತ್ತು ಇಂದಿನ ಶ್ರೀಪಾದರನ್ನು ಸೆರೆಹಿಡಿದು, ಚಿತ್ರಸಂಪುಟದಲ್ಲಿ ಮುಂದಿಟ್ಟಿದ್ದಾರೆ.
ಪುಸ್ತಕದಲ್ಲಿ ಮೂರು ಅಧ್ಯಾಯಗಳಿವೆ. ಮೊದಲ ಅಧ್ಯಾಯ ಯತಿಗಳೊಂದಿಗೆ ಒಂದು ದಿನ. ಈ ಭಾಗದಲ್ಲಿ ಪೇಜಾವರ ಸ್ವಾಮೀಜಿ ಅವರು 2002 ಮತ್ತು 2018ರಲ್ಲಿ ಕೈಗೊಂಡ ಪರ್ಯಾಯದ ಅಪರೂಪದ ಚಿತ್ರಗಳಿವೆ. ಎರಡೂ ಪರ್ಯಾಯದ ಸಂದರ್ಭದಲ್ಲಿ ಕ್ಲಿಕ್ಕಿಸಿದ ಚಿತ್ರಗಳು ಸೊಗಸಾಗಿವೆ. ಎರಡನೆಯ ಅಧ್ಯಾಯ ಕುಗ್ರಾಮಕ್ಕೆ ಬಂತು ಬೆಳಕು. ಮೂರನೇ ಅಧ್ಯಾಯದಲ್ಲಿ ಪೇಜಾವರ ಅವರಿಗೆ 80 ವರ್ಷ ಸಂದ ಸಂದರ್ಭದಲ್ಲಿ ನಡೆದ ಸಮಾರಂಭದ ಚಿತ್ರಗಳಿವೆ. ಇದೊಂದು ಅಪೂರ್ವ ಚಿತ್ರ ಸಂಪುಟ.
©2024 Book Brahma Private Limited.