ಸಂಶೋಧನೆ

Author : ಕಮಲಾ ಹಂಪನಾ

Pages 272

₹ 250.00




Published by: ಕನ್ನಡ ಸಾಹಿತ್ಯ ಪರಿಷತ್ತು
Address: ಚಾಮರಾಜಪೇಟೆ ಬೆಂಗಳೂರು 560018

Synopsys

‘ಸಂಶೋಧನಾ’ ಕೃತಿಯು ನಾಡೋಜ ಕಮಲಾ ಹಂಪನಾ ಅವರ ಸಂಪಾದಿತ ಕೃತಿಯಾಗಿದೆ. ಹತ್ತೊಂಬತ್ತು ಮತ್ತು ಇಪ್ಪತ್ತನೇಯ ಶತಮಾನದ ಹಾಸಿನಲ್ಲಿ ಸಂಶೋಧನೆಯು ಒಂದು ಗಂಭೀರ ಅಧ್ಯಯನ ಶಿಸ್ತಾಗಿ ಬೆಳೆದು ಬಂದ ಪರಿಯನ್ನು ಅರಿಯಲು ನೆರವಾಗುವಂತೆ ಈ ಕೃತಿಯ ಮೊದಲನೆಯ ಹಾಗೂ ಕೊನೆಯ ಅಧ್ಯಾಯವನ್ನು ಸಂಪಾದಕರು ಸಂಯೋಜಿಸಿದ್ದಾರೆ. ನಾನಾರಂಗದಲ್ಲಿನ ಮಹತ್ತರ ಸಾಧನೆ, ಚಿಂತನೆ ಮತ್ತು ವೈವಿಧ್ಯಪೂರ್ಣ ಪ್ರಯೋಗಗಳನ್ನು ಎಂಟು ಜನ  ವಿಷಯ ತಜ್ಞರು ಪರಿಚಯಿಸಿದ್ದಾರೆ. ಈ ಸಂಪುಟದಲ್ಲಿ ಅಳವಡಿಸಿರುವ ಬರಹ ಮತ್ತು ಬರಹಗಾರರ ಹೆಸರುಗಳು; ಸಂಶೋಧನಾ ವಿಸ್ತಾರ ವಿನ್ಯಾಸ (ಕಮಲಾ ಹಂಪನಾ), ಸಂಶೋಧನೆ, ಸಂಶೋಧನೆಯ ಪರಿಕಲ್ಪನೆಯಲ್ಲಿ ಆಗಿರುವ ಬದಲಾವಣೆ ( ಎಸ್. ಪಿ. ಪದ್ಮಪ್ರಸಾದ್), ಸಂಶೋಧನೆಯ ಪಾಶ್ಚತ್ಯ ಮತ್ತು ದೇಶಿ ನೆಲೆಗಳು, (ಸಿ. ನಾಗಣ್ಣ), ಸಂಶೋಧನೆಯ ಪರಿಕರಗಳು ಮತ್ತು ಅವುಗಳನ್ನು ಬಳಸಿಕೊಂಡ ಬಗೆ (ಎಂ.ಜಿ ಮಂಜುನಾಥ್), ಸಂಶೋಧನೆ ಮತ್ತು ಸಂಸ್ಕೃತಿ (ತಾಳ್ತಜೆ ವಸಂತಕುಮಾರ್), ಸಂಶೋಧನ ಬರಹಗಗಳ ಭಾಷೆ ( ಸೋಮಶೇಖರ ಗೌಡ), ಸಂಶೋಧನೆ ಮತ್ತು ಸಮಾಜ ಶಾಸ್ತ್ರಗಳು (ಚಂದ್ರಪೂಜಾರಿ), ಸಂಶೋಧನೆಗಾಗಿ ರೂಪಿತವಾದ ಸಂಸ್ಥೆಗಳು ಮತ್ತು ಪತ್ರಿಕೆಗಳು (ಸಂಗಮೇಶ ಸವದತ್ತಿಮಠ), ಸಂಶೋಧನೆ ಕುರಿತಂತೆ ಬಂದಿರುವ ಕೃತಿಗಳ ಪರಿಚಯ-ವಿಮರ್ಶೆ ( ಚಿತ್ತಯ್ಯ ಪೂಜಾರಿ), ಸಂಶೋಧನೆಯ ಫಲಶುತ್ರಿ ಸಮೀಕ್ಷೆ (ಕಮಲಾ ಹಂಪನಾ). ಹೀಗೆ ಅಧ್ಯಾಯಗಳಿವೆ. 

About the Author

ಕಮಲಾ ಹಂಪನಾ
(28 October 1935 - 22 June 2024)

ಲೇಖಕಿಯಾಗಿ ಚಿರಪರಿಚಿತರಾಗಿರುವ ಕಮಲಾ ಹಂಪನಾ ಅವರು ಪ್ರಾಕೃತ, ಜೈನಶಾಸ್ತ್ರದಲ್ಲಿ ಪರಿಣಿತರು. ಬೆಂಗಳೂರು ಜಿಲ್ಲೆ ದೇವನಹಳ್ಳಿಯಲ್ಲಿ 1935ರ ಅಕ್ಟೋಬರ್ 28 ರಂದು ಜನಿಸಿದರು. ತಂದೆ ಸಿ. ರಂಗಧಾಮನಾಯಕ್- ತಾಯಿ ಲಕ್ಷಮ್ಮ. ಚಳ್ಳಕೆರೆಯಲ್ಲಿ ಪ್ರಾರಂಭವಾದ ಪ್ರಾಥಮಿಕ ವಿದ್ಯಾಭ್ಯಾಸ ಬೇರೆ ಬೇರೆ ಊರುಗಳಲ್ಲಿ ಮುಂದುವರಿಯಿತು. ತುಮಕೂರಿನಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸವಾಗಿ, ಕಾಲೇಜು ವಿದ್ಯಾಭ್ಯಾಸ ಮೈಸೂರಿನಲ್ಲಿ ಮುಂದುವರೆದು ಬಿ.ಎ. ಆನರ್ಸ್ (1958) ಮಾಡಿದರು. ಕನ್ನಡ ಅಧ್ಯಾಪಕಿಯಾಗಿ (1959) ಶಿಕ್ಷಣ ವೃತ್ತಿಗೆ ಪ್ರವೇಶಿಸಿ, ಬೆಂಗಳೂರು ಮತ್ತು ಮೈಸೂರು ಮಹಾರಾಣಿ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಬೆಂಗಳೂರಿನ ವಿಜಯನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿದರು. ಸರ್ಕಾರಿ ...

READ MORE

Related Books