’ಸಂಪತ್ತಿನೊಳಗೊಬ್ಬ ಸಂತ’ ಕೃತಿಯು ರಾಜಕಾರಣಿ- ಛಾಯಾಗ್ರಾಹಕ ಎಂ. ವೈ. ಘೋರ್ಪಡೆ ಅವರ ಜೀವನ-ಚಿತ್ರ. ಘೋರ್ಪಡೆ ಅವರನ್ನು ಕುರಿತು ವಿವಿಧ ಲೇಖಕರು ಬರೆದ ಲೇಖನಗಳನ್ನು ಯುವ ವಿದ್ವಾಂಸ ಶ್ರೀಧರ ಹೆಗಡೆ ಭದ್ರನ್ ಸಂಪಾದಿಸಿದ್ದಾರೆ.
ಎಂ. ವೈ. ಘೋರ್ಪಡೆ ಅಂದ ತಕ್ಷಣ ನೆನಪಿಗೆ ಬರುವುದು ರಾಜ ಮನೆತನ ಮತ್ತು ಸಮರ್ಥ ರಾಜಕಾರಣಿ. ಅವರ ಹಲವು ಮುಖಗಳು 'ಸಂಪತ್ತಿನೊಳಗೊಬ್ಬ ಸಂತ ' ಕೃತಿಯಲ್ಲಿ ದಾಖಲಾಗಿವೆ. ಈ ಕೃತಿಯಲ್ಲಿ ವಿವಿಧ ಲೇಖಕರ, ಸಂಶೋಧಕರ ಲೇಖನಗಳಿವೆ.
ಆರ್ ವೆಂಕಟರಾಮನ್, ಇಂದಿರಾ ಗಾಂಧಿ, ಷ.ಶೆಟ್ಟರ್, ಚಿರಂಜೀವಿ ಸಿಂಗ್, ಎಸ್. ನಿಜಲಿಂಗಪ್ಪ. ಆರ್. ಸಿ. ಹಿರೇಮಠ್, ಎಚ್.ವೈ. ಶಾರದಾ ಪ್ರಸಾದ್, ಮಲ್ಲಿಕಾಘಂಟಿ, ಕೃಪಾಕರ, ಜಿ.ಪಿ. ಬಸವರಾಜು, ಟಿ. ಎನ್. ಎ. ಪೆರುಮಾಳ್, ಶಾಂತಾ ನಾಗರಾಜ್, ಪಿ. ಎಸ್. ಗೀತಾ, ಗಿರಿಧರ ಖಾಸನೀಸ, ಎಂ. ಸಿ ಪ್ರಕಾಶ್, ಡಿ. ವಾದಿರಾಜ್, ಎಸ್. ಜಿ. ಸಿದ್ಧರಾಮಯ್ಯ, ಕೆ. ವಿ. ತಿರುಮಲೇಶ್, ವಿ.ಕೆ.ಆರ್.ವಿ. ರಾವ್, ರವೀಂದ್ರ ಭಟ್ ಮಾವಖಂಡ, ಜಯಪ್ರಕಾಶ್ ನಾರಾಯಣ ಮುಂತಾದವರ ಬರಹಗಳನ್ನು ಸಂಕಲಿಸಲಾಗಿದೆ.
ಹಿರಿಯ ಲೇಖಕ ಹಾ.ಮಾ. ನಾಯಕ್ ಅವರು ಘೋರ್ಪಡೆ ಅವರನ್ನು ಕುರಿತು ಹೀಗೆ ಬರೆದಿದ್ದಾರೆ-
’ಸಾಹಿತ್ಯ, ಚಿತ್ರಕಲೆ, ಸಂಗೀತಗಳಲ್ಲಿಯೂ ಘೋರ್ಪಡೆಯವರಿಗೆ ಆಸಕ್ತಿ. ಜೀವನವನ್ನು ಅದರ ಎಲ್ಲ ನಿಟ್ಟುಗಳಿಂದಲೂ ಪೋಷಿಸಬೇಕೆಂಬುದು ಅವರ ಆಸೆ. ಅವರ ಜೊತೆ ಸಂಭಾಷಿಸುವುದೆಂದರೆ ಬೆಳಕು ಮಾಧುರ್ಯಗಳನ್ನು ಸಂಪರ್ಕಿಸಿದಂತೆ. ಸಾರ್ವಜನಿಕ ಜೀವನವೆಂದರೆ ಕೇವಲ ರಾಜಕಾರಣವಲ್ಲ, ಚುನಾವಣೆಯಲ್ಲ, ಅಧಿಕಾರವಲ್ಲ, ಸಾಹಿತ್ಯ, ಕಲೆ ಅಧ್ಯಯನ, ಆಧ್ಯಾತ್ಮ ಇವನ್ನೆಲ್ಲ ಅಂಟಿಸಿಕೊಂಡ ರಾಜಕಾರಣಿಯ ಕೆಲಸ ಮಾಡುವುದು ಸಾಧ್ಯ ಎಂಬುದಕ್ಕೆ ಅವರು ಸಾಕ್ಷಿಯಾಗಿದ್ದಾರೆ’.
©2024 Book Brahma Private Limited.