‘ಸಂಪಾದಕರ ಸದ್ಯಶೋಧನೆ ಭಾಗ -1’ ವಿಶ್ವೇಶ್ವರ ಭಟ್ ಅವರ ಅಂಕಣ ಬರಹಗಳಾಗಿವೆ. ನನಗೆ 'ವಿಶ್ವವಾಣಿ' ಪತ್ರಿಕೆಯಲ್ಲಿ ಬರೆಯಲು ಆಗಲೇ ನಾಲೈದು ಅಂಕಣಗಳಿದ್ದವು. ಬೇರೆ ಕೆಲವು ಹೆಸರಿನಲ್ಲಿ ಬರೆಯುತ್ತೇನೆ ಎಂಬ ಆಪಾದನೆಗಳೂ ಇದ್ದವು. ಅವು ಸಾಲದು ಎಂಬಂತೆ, ಈ 'ಸಂಪಾದಕರ ಸದ್ಯಶೋಧನೆ'ಯನ್ನು ನಾನು ಬೇಕೆಂದೇ ಮೈ ಮೇಲೆ ಎಳೆದುಕೊಂಡೆ. ನನ್ನ ಪಾಡಿಗೆ ನಾನಿದ್ದಿದ್ದರೆ ಯಾರೂ ಕೇಳುತ್ತಿರಲಿಲ್ಲ. ಅಷ್ಟಕ್ಕೂ, ನಾನು ಬರೆದಿದ್ದು ಕಮ್ಮಿಯಾಯಿತು ಎಂದು ಯಾವ ಓದುಗನೂ ದೂರು- ದುಮ್ಮಾನ ಹೇಳಿಕೊಂಡಿರಲಿಲ್ಲ. ಅಷ್ಟಾಗಿಯೂ ಸುಮ್ಮನಿರದೇ, ಉದ್ದೇಶಪೂರ್ವಕವಾಗಿ ಕೆಡವಿಕೊಂಡ ಬರಹಗಳಿವು. ಬರೆಯುವುದು ಕಷ್ಟ. ಅದರಲ್ಲೂ ದಿನವೂ ಬರೆಯುವುದು ಇನ್ನೂ ಕಷ್ಟ. ಇದು ನಮಗೆ ನಾವು ವಿಧಿಸಿಕೊಳ್ಳಬಹುದಾದ ಹಿತವಾದ ಶಿಕ್ಷೆ. ಆದರೆ ಈ ಶಿಕ್ಷೆಯನ್ನು ಓದುಗರಿಗೆ ವರ್ಗಾಯಿಸಬಾರದಷ್ಟೇ. ಅದನ್ನು ಮಾಡಿಲ್ಲ ಎಂದು ಎಲ್ಲಿ ಬೇಕಾದರೂ ಪ್ರಮಾಣ ಮಾಡಿ ಹೇಳಬಲ್ಲೆ. ಈ ಪುಸ್ತಕವನ್ನು ಯಾವ ಪುಟದಿಂದ ಬೇಕಾದರೂ ಓದಬಹುದು. ಹಿಂದಿನದಕ್ಕೂ ಮುಂದಿನದಕ್ಕೂ ಸಂಬಂಧವಿಲ್ಲ. ಪ್ರತಿ ಬರಹವೂ ಏಕಾಂಗಿ, ಇವು ಯಾವ ಪಂಥ, ಪ್ರಕಾರ, ಎಡ-ಬಲದ ಹಂಗಿಲ್ಲದ, ವಿಮರ್ಶಕರ ತೆಕ್ಕೆಗೆ ಸಿಗದ, ನಿರುಪದ್ರವಿ, ನಿರ್ವಿಕಾರ ಗುಣ ಹೊಂದಿದವು. ಆ ಕ್ಷಣಕ್ಕೆ ಹೊಸ ವಿಷಯ ಶೋಧಿಸುವ, ಹೇಳುವ ಹಂಬಲವೇ ಈ ಬರಹದ ತೇಲು ಭಾವ.
©2024 Book Brahma Private Limited.