ಸಾಮಾನ್ಯ ಘಟನೆಗಳ ಕುರಿತು ವೈಜ್ಞಾನಿಕ ವಿಶ್ಲೇಷಣೆ ನೀಡುವ ಕೃತಿ ಇದಾಗಿದೆ. ಪ್ರತಿಯೊಂದು ವಿಷಯಕ್ಕೂ ವೈಜ್ಞಾನಿಕ ವಿಶ್ಲೇಷಣೆ ಇರುತ್ತದೆ ಎನ್ನುವ ಲೇಖಕರು ಅದನ್ನು ಉದಾಹರಣೆ ಸಮೇತ ವಿವರಿಸಿದ್ದಾರೆ.
ಬರಹಗಾರರಾದ ಡಾ. ವೆಂಕಟಯ್ಯ ಅಪ್ಪಗೆರೆ ಅವರು ಬಿಎಸ್ಸಿ, ಎಂಎಸ್ಸಿ ಪದವಿ ಪಡೆದಿದ್ದಾರೆ. ‘ಗ್ರಾಮೀಣ ಮಹಿಳಾಭಿವೃದ್ಧಿಯಲ್ಲಿ ಸ್ವಸಹಾಯ ಗುಂಪುಗಳ ಪಾತ್ರ’ ವಿಷಯದಲ್ಲಿ ಸಂಶೋಧನಾ ಪ್ರಬಂಧ ಮಂಡಿಸಿ ಗೌರವ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಅಕೌಂಟೆಂಟ್ ಜನರೆಲ್ ಕಚೇರಿಯಲ್ಲಿ ಆಡಿಟರ್ ಆಗಿ ವರತ್ತಿ ಆರಂಭಿಸಿ, ಗ್ರಾಮೀಣ ಬ್ಯಾಂಕ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ಕುವೆಂಪು, ಬುದ್ಧ, ಲೋಹಿಯಾ ಅವರ ವಿಚಾರಗಳಿಂದ ಸ್ಪೂರ್ತಿ ಪಡೆದಿದ್ದ ಇವರು ಸಾಹಿತ್ಯ ರಚನೆಯಲ್ಲಿಯೂ ತೊಡಗಿಸಿಕೊಂಡಿದ್ದರು. ಇವರು ರಚಿಸಿದ ಪ್ರಮುಖ ಕೃತಿಗಳೆಂದರೆ ಸಾಮಾನ್ಯ ಘಟನೆಗಳ ವೈಜ್ಞಾನಿಕ ವಿಶ್ಲೇಷಣೆ, ಅಂಬೇಡ್ಕರ್ ಅಮರವಾಣಿಗಳು, ವೇದ ವಿಜ್ಞಾನ, ಸ್ವಸಹಾಯ ಗುಂಪುಗಳ ದಸ್ತಾವೇಜು ಮತ್ತು ಲೆಕ್ಕಪತ್ರಗಳು, ವೈಜ್ಞಾನಿಕ ವಿಶೇಷತೆಗಳು, ವೈಚಾರಿಕ ಚಿಂತನೆಗಳು, ಪ್ರವಾಸಿ ...
READ MORE