ಬಸವಾದಿ ಶರಣರ ತಲೆಮಾರಿನ ಶರಣರ ಜೀವನ ಕೃತಿ. ಬಸವಣ್ಣನ ಹಿರಿಯ ಕಾಲದವರಾದ ಸಕಲೇಶ ಮಾದರಸನು ಕಲ್ಲುಕುರಿಕೆ ಎಂಬ ಊರಿನ ಅರಸ. ಅರಸನಾಗಿದ್ದ ಈ ದೊರೆ ಶರಣನಾಗಿ ವಚನ ಸಾಹಿತ್ಯ ಕ್ಕೆ ವಿಚಾರಕಿಂತ ಮಿಗಿಲೇನು ಇಲ್ಲ ಎಂಬ ನುಡಿ ನೀಡಿದ ಶರಣರ ಕೃತಿದಾಗಿದೆ . ಸಕಲೇಶ ಮಾದರಸ ಬರೆದ 133 ವಚನಗಳು ದೊರೆತ್ತಿವೆ. ಈ ಬಸವಾದಿ ಶರಣರ ಜೀವನವೃತಾಂತವನ್ನು ವಿವರಿಸುವ ಕೃತಿಯಾಗಿದೆ. ಒಬ್ಬ ಅರಸನು ಶರಣನಾಗಿದರ ಕುರಿತು ವಿವರಿಸುತ್ತದೆ.
ಸೃಜನಶಿಲತೆಯ ಬಹುಮುಖಿ ಆಯಾಮಗಳಲ್ಲಿ ತೊಡಗಿಸಿಕೊಂಡಿರುವ ಕವಿ ಸಿದ್ಧರಾಮ ಹೊನ್ಕಲ್ ಅವರು ಯಾದಗಿರಿ ಜಿಲ್ಲೆಯ, ಶಹಾಪುರ ತಾಲೂಕಿನ ಸಗರ ಗ್ರಾಮದವರು. ಎಂ ಎ., (ಎಲ್.ಎಲ್.ಬಿ ), ಡಿ.ಎನ್.ಹೆಚ್.ಇ , ಪಿ ಜಿ.ಡಿಎಮ್.ಸಿ.ಜೆ ಪದವೀಧರರು. ಕಥೆ, ಕಾವ್ಯ, ಹನಿಗವನ, ಲಲಿತ ಪ್ರಬಂಧ, ಪ್ರವಾಸ ಕಥನ, ವ್ಯಕ್ತಿ ಚಿತ್ರಣ, ಸಂಪಾದನೆ - ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳ 40 ಕೃತಿಗಳನ್ನು ರಚಿಸಿದ್ದಾರೆ. ಆರೋಗ್ಯ ಶಿಕ್ಷಣಾಧಿಕಾರಿಯಾಗಿ ನಿವೃತ್ತರು. ಕೃತಿಗಳು: ಕಥೆ ಕೇಳು ಗೆಳೆಯ, ಬಯಲು ಬಿತ್ತನೆ, ನೆಲದ ಮರೆಯ ನಿನಾದ, ಅಂತರಂಗದ ಹನಿಗಳು, ಹೊಸ ಹಾಡು, ಬೆವರು, ನೆಲದ ನುಡಿ, ಗಾಂಧಿಯ ನಾಡಿನಲ್ಲಿ, ಪಂಚನಾದಿಗಳ ನಾಡಿನಲ್ಲಿ ಮುಂತಾದವು. ...
READ MORE