ಸಜ್ಜನ ರಾಜಕಾರಣಿ ಬಿ.ಎ ಬೋಳಶೆಟ್ಟರು

Author : ನಾಗೇಶ್ ಜೆ. ನಾಯಕ

Pages 102

₹ 250.00




Year of Publication: 2023
Published by: ಸಹೃದಯ ಸಾಹಿತ್ಯ ಪ್ರತಿಷ್ಠಾನ
Address: ಸವದತ್ತಿ

Synopsys

ಬೆಳಗಾವಿ ಜಿಲ್ಲೆಯು ಕಲೆ, ಸಾಹಿತ್ಯ, ಸಂಸ್ಕೃಂತಿಗೆ ಹೆಸರಾದಂತೆ, ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲೂ ಖ್ಯಾತಿವೆತ್ತ ಜಿಲ್ಲೆಯಾಗಿದೆ. ಈ ಜಿಲ್ಲೆ ಬೈಲಹೊಂಗಲ, ಸವದತ್ತಿ ತಾಲೂಕುಗಳು ಧಾರ್ಮಿಕ, ವ್ಯಾಪಾರ, ವಾಣಿಜ್ಯ ಸಹಕಾರ ಶಿಕ್ಷಣ ಹಾಗೂ ಪ್ರಾಮಾಣಿಕತೆಯ ರಾಜಕಾರಣಕ್ಕೆ ಹೆಸರಾದುದು. ಈ ನೆಲದ ಅಪ್ಪಟ ಸಾಧಕರನ್ನು ಅವರ ಬದುಕಿನ ಸಾಧನೆಗಳೊಂದಿಗೆ ತುಂಬಾ ಕಾವ್ಯಾತ್ಮಕವಾಗಿ ಕಟ್ಟಿಕೊಟ್ಟ ಈ ಕೃತಿಯು ಚಾರಿತ್ರಿಕವಾದುದು, ಸಾಧಕರ ಬದುಕಿನೊಂದಿಗೆ ಶತಮಾನದ ಹಿಂದಿನ ಕಾಲದ ಜನರು ಅವರ ಮನಸ್ಥಿತಿಗಳನ್ನು ಕಟ್ಟಿಕೊಡುವ ಮೂಲಕ ನಾಗೇಶರು ಚರಿತ್ರೆಯ ಪುಟಗಳನ್ನು ವಿಸ್ತರಿಸಿದ್ದಾರೆ. ‘ಸಜ್ಜನ ರಾಜಕಾರಣಿ ಬಿ.ಎ. ಬೋಳಶೆಟ್ಟರು’ ಈ ಕೃತಿಯು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಉಡುಕೇರಿಯ ದಿವಂಗತ ಬಾಬುರಾವ್ ಅಣ್ಣಪ್ಪ ಬೋಳಶೆಟ್ಟಿ ಅವರ ಜೀವನಗಾಥೆಯಾಗಿದೆ.

About the Author

ನಾಗೇಶ್ ಜೆ. ನಾಯಕ
(23 February 1975)

ನಾಗೇಶ್ ಜೆ. ನಾಯಕ ವೃತ್ತಿಯಲ್ಲಿ ಶಿಕ್ಷಕರು. 1975 ಫೆಬ್ರವರಿ 23 ರಂದು ಸವದತ್ತಿಯಲ್ಲಿ ಜನಿಸಿದರು. ಕನ್ನಡ ದಿನಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ‘ನೀನೊಂದು ಮುಗಿಯದ ಸಂಭ್ರಮ, ಪ್ರೀತಿಯಿಂದ ಪ್ರೀತಿಗೆ, ಭರವಸೆಗಳ ಬೆನ್ನೇರಿ, ಪುಟ್ಟ ಪದ್ಯಗಳು, ಕವಿ ಸಮಯ  ಮಠದೊಳಗಣ ಬೆಕ್ಕು’ ಮುಂತಾದ ಕೃತಿಗಳು ಪ್ರಕಟಣೆಗೊಂಡಿವೆ. ಬಯಲ ಕನ್ನಡಿ-ವಿಮರ್ಶಾ ಸಂಕಲನ, ಒಡಲ ದನಿ-ಅಂಕಣ ಬರಹಗಳು, ಘನದ ಕುರುಹು-ವ್ಯಕ್ತಿ ಚಿತ್ರಣ, ಚಿನ್ನದ ಚೂರಿ-ಕಥಾ ಸಂಕಲನ ಅವರ ಇತ್ತಿಚಿನ ಕೃತಿಗಳಾಗಿವೆ. ಇವರ ಸಾಹಿತ್ಯ ರಚನೆಗಾಗಿ ಸಂಕ್ರಮಣ ಸಾಹಿತ್ಯ ಪ್ರಶಸ್ತಿ, ಸಂಚಯ ಕಾವ್ಯ ಪುರಸ್ಕಾರ, ಆಜೂರು ಪುಸ್ತಕ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ...

READ MORE

Related Books