ರಂಗಸಂಪನ್ನರು ಗಿರೀಶ ಕಾರ್ನಾಡ

Author : ದಿವ್ಯಸ್ಪತಿ ಹೆಗಡೆ

Pages 96

₹ 40.00




Year of Publication: 2004
Published by: ಕರ್ನಾಟಕ ನಾಟಕ ಅಕಾಡೆಮಿ
Address: ಬೆಂಗಳೂರು

Synopsys

ಗಿರೀಶ ಕಾರ್ನಾಡ ಒಬ್ಬ ರಂಗನಟ, ನಾಟಕಕಾರ, ಚಲನಚಿತ್ರ, ಕಿರುತೆರೆಯ ನಟ, ನಿರ್ದೇಶಕ, ಚಿತ್ರಕಥಾಲೇಖಕ, ಭಾಷಾಂತರಕಾರ, ಹಾಗೂ ಆಡಳಿತಗಾರ. ನಾಟಕಕಾರನಾಗಿ ಅವರಿಗೆ ಸಂದ ಜ್ಞಾನಪೀಠ ಪ್ರಶಸ್ತಿ ಕನ್ನಡಿಗರು ಮಾತ್ರವಲ್ಲ ಭಾರತೀಯ ನಾಟಕಕಾರರೆಲ್ಲರೂ ಹೆಮ್ಮೆ ಪಟ್ಟುಕೊಳ್ಳುವಂತಹದು. ಕರ್ನಾಟಕ ನಾಟಕ ಅಕಾಡೆಮಿ ಅಸ್ತಿತ್ವಕ್ಕೆ ಬಂದಾಗ ಅದರ ಮೊದಲ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಹಿರಿಮೆಯೂ ಕಾರ್ನಾಡರದ್ದು. ನಾಟಕ ಅಕಾಡೆಮಿಯಿಂದ ಅದರ ಮಾಜಿ ಅಧ್ಯಕ್ಷರುಗಳ ಕುರಿತು ಪರಿಚಯಾತ್ಮಕ ಪುಸ್ತಕ ಪ್ರಕಟವಾಗಿದ್ದು ಇದು ಕಾರ್ನಾಡರ ಕುರಿತ ಪರಿಚಯದ ಕೃತಿ. 

About the Author

ದಿವ್ಯಸ್ಪತಿ ಹೆಗಡೆ

ಹಿರಿಯ ಲೇಖಕರು, ವಿಮರ್ಶಕರು ಆದ ದಿವ್ಯಸ್ಪತಿ ಹೆಗಡೆಯವರು ಅಂಕಣಕಾರರಾಗಿಯೂ ಪ್ರಸಿದ್ಧಿ ಪಡೆದಿದ್ದಾರೆ. 90ರ ದಶಕದಲ್ಲಿ ಸಿನಿಮಾ, ಕಿರುತೆಯ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸಮೀಪ ದರ್ಶನ ಎಂಬ ಅಂಕಣ ಬರೆಯುತ್ತಿದ್ದ ಅವರು ಕನ್ನಡ ನಾಟಕಗಳ ಮೇಲೆ ಪಾಶ್ಚ್ಯಾತ್ಯ ನಾಟಕಗಳ ಪ್ರಭಾವ ಎಂಬ ವಿಚಾರದ ಮೇಲೆ ಮಹತ್ವದ ಪ್ರಬಂಧ ಬರೆದು ಪಿಎಚ್.ಡಿ ಪದವಿ ಗಳಿಸಿದ್ದಾರೆ. ಸಾಹಿತಿ, ಲೇಖಕ, ನಾಟಕಕಾರ, ಕಲಾವಿದರಾದ ಗಿರೀಶ್ ಕಾರ್ನಾಡರ ಕುರಿತು ರಂಗಸಂಪನ್ನರು ಎಂಬ ಕೃತಿಯನ್ನು ರಚಿಸಿದ್ದಾರೆ. ...

READ MORE

Related Books