ರಾಗಿತಳಿಯ ಏಳ್ಗೆಗೆ ಅಹರ್ನಿಶಿ ಶ್ರಮಿಸಿದವರು ಲಕ್ಷ್ಮಣಯ್ಯ. ರಾಗಿ ಲಕ್ಷ್ಮಣ ಎಂದೇ ಹೆಸರುವಾಸಿ ಆಗಿರುವ ಅವರು ಸಾಮಾನ್ಯ ಪರಿಸರದಿಂದ ಬಂದವರು. ಆದರೆ ಅಸಾಮಾನ್ಯ ಸಾಧನೆ ಮಾಡಿ ವ್ಯವಸಾಯ ವಿಜ್ಞಾನ ಕ್ಷೇತ್ರದಲ್ಲಿ ಹೆಸರಾದವರು. ಅವರ ಸಾಧನೆಯ ಕಿರುಪರಿಚಯ ಮಾಡಿಕೊಡುವ ಕೃತಿ ಇದು.
ಡಾ. ಶರಣಬಸವೇಶ್ವರ ಅಂಗಡಿ ವೃತ್ತಿಯಿಂದ ಕೃಷಿ ವಿಜ್ಞಾನಿಯಾಗಿದ್ದಾರೆ. ಧಾರವಾಡದ ಕೃಷಿ ಕಾಲೇಜು, ತಮಿಳುನಾಡು ಕೃಷಿ ವಿಶ್ವವಿದ್ಯಾಲಯ ಹಾಗೂ ನವದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಗಳಲ್ಲಿ ಅಭ್ಯಾಸ ಮಾಡಿ ಕೃಷಿಯಲ್ಲಿ ಕ್ರಮವಾಗಿ ಬಿ.ಎಸ್ಸಿ., ಎಂ.ಎಸ್ಸಿ. ಮತ್ತು ಪಿಎಚ್.ಡಿ., ಪದವಿ ಗಳನ್ನು ಪಡೆದಿದ್ದಾರೆ. ಬೆಂಗಳೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯಗಳ ಹಾಗೂ ಭಾರತೀಯ ಕೃಷಿ ಸಂಶೋಧನಾ ಸೇವೆಯ ವಿಜ್ಞಾನಿಯಾಗಿ ಅನುಭವ ಹೊಂದಿದ್ದಾರೆ. 1993 ರಿಂದ ಖಾಸಗಿ ಬೀಜೋದ್ಯಮದ ನಂಟು ಹೊಂದಿರುವ ಇವರು ಬಹುರಾಷ್ಟ್ರೀಯ ಕಂಪೆನಿಯೊಂದರ ಸಂಶೋಧನಾ ಮುಖ್ಯಸ್ಥರು, ಅನೇಕ ಪತ್ರಿಕೆ, ನಿಯತ ಕಾಲಿಕೆಗಳಲ್ಲಿ ತಮ್ಮ ನೆಚ್ಚಿನ ವಿಷಯದ ಬಗ್ಗೆ ಸುಮಾರು 50 ಜನಪ್ರಿಯ ವಿಜ್ಞಾನ ...
READ MORE