ಮೂಲತ ವಿದೇಶಿಯನಾಗಿದ್ದರೂ ಕನ್ನಡ ಭಾಷೆ , ಸಾಹಿತ್ಯ , ಶಾಸನ ಎಂಬ ವಿಷಯಗಳ ಬಗ್ಗೆ ಮಾತನಾಡಿದರೆ ತಟ್ಟನೆ ನೆನಪಿಗೆ ಬರುವ ಹೆಸರು “ ಬಿ . ಎಲ್ . ರೈಸ್ ” ಅವರದು . ಕನ್ನಡ ಸಂಶೋಧನೆಯಲ್ಲಿ ಬಿ . ಎಲ್ . ರೈಸ್ ಹೆಸರು ಗಮನಾರ್ಹವಾದುದು . ಪಾಶ್ಚಾತ್ಯ ಮೂಲದವರಾದ ಇವರು ವ್ಯಾಸಂಗ , ಪುರಾತತ್ತ್ವ ಶೋಧನೆ , ಜನಾಂಗೀಯ ಅಧ್ಯಯನ , ಹಸ್ತಪ್ರತಿ ಸಂಗ್ರಹಣೆ , ಗ್ರಂಥ ಸಂಪಾದನೆ ಮೊದಲಾದ ಸಾಂಸ್ಕೃತಿಕ ಸಂಶೋಧನಾ ವಿಷಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು . ಇವರ ಜೀವನ ಮತ್ತು ಸಾಧನೆಗಳನ್ನು , ಮುಂದಿನ ಪೀಳಿಗೆಗೆ ಬಿ . ಎಲ್ . ರೈಸ್ ಅವರನ್ನು ಪರಿಚಯಿಸುವ ಪ್ರಯತ್ನವನ್ನು ಡಾ . ಎಸ್ . ಎಲ್ . ಶ್ರೀನಿವಾಸ ಮೂರ್ತಿ ಅವರು ಈ ಕೃತಿಯಲ್ಲಿ ಮಾಡಿದ್ದಾರೆ .
ಡಾ, ಎಸ್.ಎಲ್ ಶ್ರಿನಿವಾಸಮೂರ್ತಿ ಅವರು ವಿಜಯ ಪದವಿ ಪೂರ್ವ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದವರು. ಸಸ್ಯ ಅಂಗಾಂಶ ಕೃಷಿ ಕ್ಷೇತ್ರದಲ್ಲಿ ಹಲವು ವರ್ಷಗಳ ಅನುಭವ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಸ್ನಾತಕೋತ್ತರ ಪದವಿ, ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಬೆಂಜಮಿನ್ ಲೂಯಿರೈಸ್ ರವರ ಜೀವನ ಮತ್ತು ಸಾಧನೆಯನ್ನು ಕುರಿತಂತೆ ರಚಿಸಿದ ಮಹಾಪ್ರಬಂಧಕ್ಕೆ ಪಿ.ಎಚ್.ಡಿ ಪದವಿಯನ್ನು ಪಡೆದಿದ್ಧಾರೆ. ಪಾ.ವೆಂ. ಆಚಾರ್‍ಯರ ಸಮಗ್ರ ಬರಹಗಳ ಹಲವು ಸಂಪುಟಗಳನ್ನು ಸಂಪಾದಿಸಿದ್ದಾರೆ. ಕೃತಿ ಸಂಪಾದನೆ, ಪುಸ್ತಕ ಸಂಪಾದನೆ , ಪುಸ್ತಕ ವಿಮರ್ಶೆ, ಕಾರ್ಯದಲ್ಲಿ ತಮ್ನನ್ನು ತೊಡಗಿಸಿಕೊಂಡಿದ್ದಾರೆ. ...
READ MORE